ಸಮ್ಮೇಳನದ ಸರ್ವಾಧ್ಯಕ್ಷ ಡಾ.‌ದೊಡ್ಡರಂಗೇಗೌಡರು ಪುರ ಪ್ರವೇಶ

0
103
ಸಮ್ಮೇಳನ

ಹಾವೇರಿ: ಏಲಕ್ಕಿ ಕಂಪಿನ‌ ನಾಡು ಹಾವೇರಿಯಲ್ಲಿ ನಡೆಯುತ್ತಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ದೊಡ್ಡರಂಗೇಗೌಡ ಅವರು ಹಾವೇರಿ ಪುರ ಪ್ರವೇಶ ಮಾಡಿದರು.
ಹಾವೇರಿಯ ತೋಟದ ಯಲ್ಲಾಪುರದಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಲ್ಲಾ ಪಂಚಾಯತಿ ಸಿಇಓ ಮಹ್ಮದ್ ರೋಷನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ‌ಡಾ. ಮಹೇಶ ಜೋಶಿ, ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಏಲಕ್ಕಿ ಮಾಲೆ ಹಾಕಿ ಸ್ವಾಗತಿಸಿದರು. ಮಹಿಳೆಯರು‌ ಆರತಿ ಎತ್ತಿ ಸ್ವಾಗತಿಸಿದರು. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಅಪಾರ ಸಂಖ್ಯೆಯಲ್ಲಿ ಸೇರಿ ಸ್ವಾಗತಿಸಿದರು.

Previous articleಹೊತ್ತಿ ಉರಿದ ಬಸ್‌: ಪ್ರಯಾಣಿಕರು ಪಾರು
Next articleಲಾರಿಗೆ ಬಸ್ ಡಿಕ್ಕಿ: ೧೧ಕ್ಕೂ ಹೆಚ್ಚು ಜನರಿಗೆ ಗಾಯ