ವಿಜಯಪುರ: ಬ್ಯಾಂಕ್ ಸಿಬ್ಬಂದಿ ಕಟ್ಟಿ ಹಾಕಿ 8 ಕೋಟಿ, 15 ಕೆಜಿ ಆಭರಣ ದರೋಡೆ

0
26

ವಿಜಯಪುರ : ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಮುಸುಕುದಾರಿಗಳು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ದಿ.16.09.2025 ರ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮಿಲಿಟರಿ ಡ್ರೆಸ್ ನಲ್ಲಿ ಬ್ಯಾಂಕ್ ಪ್ರವೇಶ ಮಾಡಿರುವ ದರೋಡೆಕೋರರು ಮುಖಕ್ಕೆ ಮಾಸ್ಕ್ ಧರಿಸಿ ಕಂಟ್ರಿ ಪಿತ್ತೂಲು, ಮಾರಕಾಸ್ತ್ರಗಳನ್ನು ತೋರಿಸಿ ಸಿಬ್ಬಂದಿಗಳನ್ನು ಹೆದರಿಸಿದ್ದಾರೆ.

ನಂತರ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಸಿಬ್ಬಂದಿಗಳನ್ನು ಹಿಡಿದು ಕೈಕಾಲು ಕಟ್ಟಿಹಾಕಿ ಬ್ಯಾಂಕ್ ನಲ್ಲಿನ ಚಿನ್ನಭಾರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ದರೋಡೆಯಾಗಿರುವ ಬ್ಯಾಂಕ್ ನಿಂದ ಎಷ್ಟು ಚಿನ್ನ ಹಾಗೂ ನಗದು ದರೋಡೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಬ್ಯಾಂಕ್ ಎದುರಿಗೆ ಸ್ಥಳೀಯರು ಜಮಾಯಿಸಿದ್ದಾರೆ.

ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಪೋಸ್ಟ್ ಕಾರ್ಡ್ ಮೂಲಕ ʼಅರಸಯ್ಯನ ಪ್ರೇಮ ಪ್ರಸಂಗʼ ಅನಾವರಣ
Next articleಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ನೇಮಕಾತಿ ಮಾರ್ಗಸೂಚಿ ಪರಿಷ್ಕರಣೆ

LEAVE A REPLY

Please enter your comment!
Please enter your name here