ದಾಂಡೇಲಿ: ಜಲವಿಮಾನ ನಿಲ್ದಾಣಕ್ಕೆ ಸೂಪಾ ಜಲಾಶಯ ಪ್ರದೇಶ ಆಯ್ಕೆ

0
24
ಸಾಂದರ್ಭಿಕ ಚಿತ್ರ

ದಾಂಡೇಲಿ : ಕೇಂದ್ರ ಸರ್ಕಾರ ಉಡಾಣ್ 5.5 ಯೋಜನೆಯಡಿ ಜಲವಿಮಾನ ನಿಲ್ದಾಣಕ್ಕಾಗಿ ಗುರುತಿಸಿರುವ 7 ಪ್ರದೇಶಗಳಲ್ಲಿ 2 ಪ್ರದೇಶಗಳು ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಗೆ ಸೇರಿದ್ದಾಗಿದೆ. ಕಾರವಾರ ಕಾಳಿ ನದಿ ಸಂಗಮ ಪ್ರದೇಶ, ಇನ್ನೊಂದು ದಾಂಡೇಲಿ ಸಮೀಪದ ಕಾಳಿ ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಸೂಪಾ ಜಲಾಶಯ ಪ್ರದೇಶ. ಉಡಾನ್ 5.5 ಯೋಜನೆಯ ಭಾಗವಾಗಿ ಈ ಎರಡು ಜಲವಿಮಾನ ನಿಲ್ದಾಣಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದರಿಂದ ಜಿಲ್ಲೆಯ ಮತ್ತು ದಾಂಡೇಲಿ ಪ್ರವಾಸೋದ್ಯಮದಲ್ಲಿ ಮಹತ್ತರ ಚೇತರಿಕೆ ಕಂಡು ಬರಲಿದೆ. ಗಣೇಶ ಗುಡಿ ಸೂಪಾ ಜಲಾಶಯದ ಹಿನ್ನೀರನ್ನು ಈ ಕಾರ್ಯಕ್ಕಾಗಿ ಬಳಸಲಾಗುತ್ತದೆ

ಜಲವಿಮಾನ ಎಂದರೇನು?: ಒಂದು ನದಿಯಿಂದ ಮತ್ತೊಂದು ನದಿಗೆ ವಿಮಾನ ಜಲದ ಮೇಲೆ ಇಳಿಯುವುದೇ ವಿಮಾನಯಾನವಾಗಿದೆ. ಈ ವಿಮಾನ ನದಿ, ಜಲಾಶಯದಲ್ಲಿ ನಿರ್ಮಿಸಿರುವ ಜಟ್ಟಿಯಲ್ಲಿ (ರನ್ ವೇ) ಇಳಿಯುತ್ತದೆ. ಮತ್ತು ಸಮೀಪದ ಏರ್ ಪೋರ್ಟ್‌ಗಳಲ್ಲಿ ಕೂಡ ವಿಮಾನ ಇಳಿಸಬಹುದಾಗಿದೆ.

ಈ ವಿಮಾನಗಳು ಎರಡು ರೀತಿಯಲ್ಲಿ ಇಳಿಯುತ್ತದೆ. ಈ ಜಾಗದಲ್ಲಿ ಪರಿಸರ ಮಾಲಿನ್ಯ ಉಂಟಾಗುವದಿಲ್ಲ. ಇದಕ್ಕೆ 1.5 ಕಿ.ಮೀ ಉದ್ದ 10 ಅಡಿ ಆಳದ ಅವಶ್ಯಕತೆ ಇದ್ದು ಈ ಯೋಜನೆ ವಿದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಪ್ರವಾಸೋದ್ಯಮದ ಯಶಸ್ಸಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸಲಿದೆ.

Previous articleವಾರ್ 2 ಒಟಿಟಿ ಬಿಡುಗಡೆ: ಬಿಗ್ ಆಕ್ಷನ್ ಥ್ರಿಲ್ಲರ್ ಆನ್‌ಲೈನ್‌ನಲ್ಲಿ ಯಾವಾಗ ಮತ್ತು ಎಲ್ಲಿ ನೋಡಬಹುದು?
Next articleBCCI: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕರಾಗಿ ಅಪೊಲೊ ಟೈಯರ್ಸ್

LEAVE A REPLY

Please enter your comment!
Please enter your name here