ಆರ್‌ಟಿಪಿಎಸ್‌ನ ಘಟಕದಲ್ಲಿ ಅವಘಡ ಕಾರ್ಮಿಕರಿಗೆ ಗಾಯ

0
16

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಸ್ಕ್ರಾಬ್ ಬಿದ್ದು ಮೂವರು ಗುತ್ತಿಗೆ ಕಾರ್ಮಿಕರಿಗೆ ಗಾಯಗೊಂಡಿರುವ ಘಟನೆ ಬುಧವಾರ ಆರ್‌ಟಿಪಿಎಸ್‌ನಲ್ಲಿ ನಡೆದಿದೆ. ಆರ್‌ಟಿಪಿಎಸ್‌ನ ಒಂದನೇ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಮೇಲೆ ಏರಿ ಕೆಲಸ ಮಾಡುತ್ತಿದ್ದ ವೇಳೆ ಸ್ಕ್ರಾಬ್ ಕಟ್ ಆಗಿ ಕಾರ್ಮಿಕರ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಬಿಹಾರ ಮೂಲದ ಗುತ್ತಿಗೆ ಕಾರ್ಮಿಕರಾದ ಸೋನುಕುಮಾರ್, ರಾಮ್‌ಪ್ರಿತ್ ಹಾಗೂ ಮಹಾದೇವ ಎಂಬುವ ಕಾರ್ಮಿಕರೇ ಗಾಯಗೊಂಡಿದ್ದಾರೆ. ತಕ್ಷಣಕ್ಕೆ ಕಾರ್ಮಿಕರನ್ನು ಆಂಬ್ಯುಲೆನ್ಸ್ ಮೂಲಕ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅದರಲ್ಲಿ ಮಹಾದೇವ ಎನ್ನುವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಪ್ರಕ್ರಿಯಿಸಿದ ಆರ್‌ಟಿಪಿಎಸ್ ಇಡಿ, ಅವಘಡ ಸಂಭವಿಸಿರುವುದು ನಿಜ. ಆದರೆ, ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ. ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಚಿಕಿತ್ಸೆ ಕೊಡಲಾಗಿದೆ. ಕಾರ್ಮಿಕರು ರಕ್ಷಣಾ ಸಾಮಗ್ರಿಗಳ ಧರಿಸಿದ್ದರಿಂದ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ.

Previous articleಕೊಟ್ಟ ಸಮಯದಲ್ಲಿ ಭಾಷಣ ಮುಗಿಯದಿದ್ದರೆ ಮೈಕ್ ಬಂದ್
Next articleಕನ್ನಡ ಮನಸ್ಸುಗಳು ಇಚ್ಛಾಶಕ್ತಿ ಇರುವವರಿಗಾಗಿ ಕಾಯುತ್ತಿವೆ..