ಮೈಸೂರು: ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ

0
48

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕು ಮುನ್ನ, ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಮೈಸೂರಿನ ಅರಮನೆಯಲ್ಲಿ ವಾಸಿಸುತ್ತಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ಸಲ್ಲಿಸಿದರು.

ಅರಮನೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ, ಸಚಿವರು ಸಾಂಪ್ರದಾಯಿಕವಾಗಿ ಫಲ-ತಾಂಬೂಲ ನೀಡಿ ಆಹ್ವಾನಿಸಿದರು. ಇದು ಪ್ರತೀ ವರ್ಷ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಅತಿಹೆಚ್ಚು ಪ್ರಾಮುಖ್ಯತೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ರಾಜವಂಶದ ಸಮ್ಮಿಲನದಿಂದಲೇ ದಸರಾ ಉತ್ಸವಕ್ಕೆ ಐತಿಹಾಸಿಕತೆ ಮತ್ತು ಗೌರವ ಹೆಚ್ಚುತ್ತದೆ ಎಂದು ಪರಿಗಣಿಸಲಾಗುತ್ತದೆ.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್ ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ದಸರಾ ಉತ್ಸವದ ಹಿನ್ನೆಲೆ: ಮೈಸೂರು ದಸರಾ ಉತ್ಸವವು ರಾಜ್ಯದ ಪ್ರತಿಷ್ಠೆಯ ನಾಡಹಬ್ಬವಾಗಿದ್ದು, ಪ್ರತೀ ವರ್ಷ ವಿಜಯದಶಮಿಯಂದು ಜಂಬೂಸವಾರಿ ಮೂಲಕ ಭವ್ಯವಾಗಿ ಅಂತ್ಯಗೊಳ್ಳುತ್ತದೆ. ಅರಮನೆ, ದಸರಾ ಉತ್ಸವದ ಕೇಂದ್ರಬಿಂದುವಾಗಿದ್ದು, ರಾಜವಂಶದ ಸದಸ್ಯರಿಗೆ ಆಹ್ವಾನ ನೀಡುವುದು ದಸರಾ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಈ ವರ್ಷದ ದಸರಾ ಉತ್ಸವವನ್ನು ಇನ್ನಷ್ಟು ವೈಭವಶಾಲಿಯಾಗಿ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಪ್ರದರ್ಶನಗಳು ಹಾಗೂ ರಾಜ್ಯೋತ್ಸವದ ಶೋಭಾಯಾತ್ರೆಗಳು ಮೈಸೂರಿನ ಬೀದಿಗಳನ್ನು ಕಂಗೊಳಿಸಲಿವೆ.

ದಸರಾ ಕಾರ್ಯಕ್ರಮಗಳ ಟಿಕೆಟ್ ಹಾಗೂ ವಿಶೇಷ ಗೋಲ್ಡ್ ಕಾರ್ಡ್‌ಗಳು: ಮೈಸೂರಿನಲ್ಲಿ 2025 ರ ನವರಾತ್ರಿ ಉತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. ಜಿಲ್ಲಾಡಳಿತವು ಈ ಉತ್ಸವದ ಟಿಕೆಟ್‌ಗಳು ಮತ್ತು ಗೋಲ್ಡನ್ ಪಾಸ್‌ಗಳನ್ನು ಸಾರ್ವಜನಿಕ ಬಳಕೆಗಾಗಿ ಅಧಿಕೃತ ದಸರಾ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಟಿಕೆಟ್‌ಗಳು ಅಧಿಕೃತ ದಸರಾ ಜಾಲತಾಣ mysoredasara.gov.in ಮೂಲಕ ಆನ್‌ಲೈನ್‌ನಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

Previous articleಬ್ಯಾಲೆಟ್ ಪೇಪರ್‌ಗೆ ಕಾಯ್ದೆ ತಿದ್ದುಪಡಿ ಬೇಡ?
Next articleಉತ್ತರ ಕನ್ನಡ: ಜಿಲ್ಲೆಯಾದ್ಯಂತ ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಅಭಿಯಾನ

LEAVE A REPLY

Please enter your comment!
Please enter your name here