ಜಿಎಸ್‌ಟಿ ಪರಿಣಾಮ: ದೇಶದಲ್ಲಿ ಬೈಕ್ ಮಾರಾಟ 5-6% ಏರಿಕೆ ಸಾಧ್ಯತೆ

0
44

ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಷ್ಕರಣೆಯಿಂದ ದ್ವಿಚಕ್ರ ವಾಹನಗಳ ಮಾರಾಟ ಶೇ. 5-6ರಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ರೇಟಿಂಗ್ಸ್ ವರದಿ ಹೇಳಿದೆ.

ಸ್ಥಳೀಯ ಆಟೊಮೊಬೈಲ್ ಕೈಗಾರಿಕೆಗೆ ಹೊಸ ಕ್ರಮ ಉತ್ತೇಜನ ನೀಡಲಿದೆ. ಅದರಲ್ಲೂ ದ್ವಿಚಕ್ರ ವಾಹನ ಮತ್ತು ಪ್ಯಾಸೆಂಜರ್ ವೆಹಿಕಲ್ಸ್ ವಿಭಾಗಗಳು ಹೆಚ್ಚಿನ ಲಾಭ ಪಡೆಯಲಿವೆ. ಇವೆರಡೇ ಕ್ಷೇತ್ರಗಳು ಮಾರುಕಟ್ಟೆಯ ಶೇ. 90ರಷ್ಟು ಪಾಲು ಹೊಂದಿವೆ. ಒಬಿಡಿ 2 ನಿರ್ದಿಷ್ಟ ಮಾನವನ್ನು ಜಾರಿಗೆ ತಂದಿದ್ದರಿಂದ ದ್ವಿಚಕ್ರ ವಾಹನಗಳ ಮಾರಾಟ ಮೊದಲ ತ್ರೈಮಾಸಿಕದಲ್ಲಿ ಕುಸಿದಿದೆ. ಇದೀಗ ಈ ವಲಯಕ್ಕೆ ಚೇತರಿಕೆ ದೊರೆಯಲಿದೆ.

ಪ್ಯಾಸೆಂಜರ್ ವಲಯದಲ್ಲಿ 2-3 ಪರ್ಸೆಂಟ್ ಮಾರಾಟ ವೃದ್ಧಿಯನ್ನು ನಿರೀಕ್ಷಿಸಲಾಗಿದೆ. ಜೂನ್-ಆಗಸ್ಟ್ ಅವಧಿಯಲ್ಲಿ ಅಪರೂಪದ ಖನಿಜಗಳ ಕೊರತೆ ಸೇರಿ ಹಲವು ಕಾರಣಗಳಿಂದ ವಾಹನಗಳ ಮಾರಾಟ ಕಡಿಮೆಯಾಗಿತ್ತು. ಈ ವಿಭಾಗವೂ ಜಿಎಸ್‌ಟಿ ಪರಿಷ್ಕರಣೆಯಿಂದ ಸುಧಾರಣೆಯಾಗಲಿದೆ ಎಂದು ವರದಿ ಹೇಳಿದೆ.

ಪ್ಯಾಸೆಂಜರ್ ವೆಹಿಕಲ್ಸ್ ದರ 30,000 ದಿಂದ 60,000 ರೂ. ವರೆಗೆ ಕಡಿಮೆಯಾಗಲಿದೆ. ದ್ವಿಚಕ್ರ ವಾಹನಗಳು 3,000ದಿಂದ 70,000ದ ವರೆಗೆ ತಗ್ಗಲಿದೆ. ಇದರ ಜೊತೆಗೆ ಪರಿಷ್ಕರಣೆ ಜಾರಿ ವೇಳೆ ಹಬ್ಬದ ಹಂಗಾಮ ಜರುಗಲಿದ್ದು ಜನರಿಗೆ ಇನ್ನಷ್ಟು ಡಿಸ್ಕೌಂಟ್ ಸಿಗಲಿದೆ. ಇದರಿಂದ ಮಾರಾಟಕ್ಕೆ ಉತ್ತೇಜನ ದೊರೆಯಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್‌ನ ಹಿರಿಯ ನಿರ್ದೇಶಕ ಅನುಜ್ ಸೇಠಿ ಹೇಳಿದ್ದಾರೆ.

Previous articleಮೈಸೂರು: ಬಾನು ಮುಷ್ತಾಕ್ ಕನ್ನಡಾಂಬೆ ಹೇಳಿಕೆ ಬಗ್ಗೆ ನಮ್ಮ ತಕರಾರು
Next articleಜಿಎಸ್‌ಟಿ ಪರಿಷ್ಕರಣೆ: ಹುಂಡೈ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, ಪಟ್ಟಿ

LEAVE A REPLY

Please enter your comment!
Please enter your name here