ರಾಯಚೂರು: ಲಾರಿ ಹರಿದು ವ್ಯಕ್ತಿ ಸಾವು

0
27

ರಾಯಚೂರು: ಹಾರುಬೂದಿ ಲಾರಿ ಹರಿದು ವ್ಯಕ್ತಯೊಬ್ಬ ಸಾವನ್ನಪ್ಪಿದ ಘಟನೆ ಸೋಮವಾರ ತಾಲೂಕಿನ ಶಕ್ತಿನಗರದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಲೇಬರ್ ಕಾಲೊನಿ ನಿವಾಸಿ ಸಿಂಹಾದ್ರಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ. ಆಟೋ ಚಾಲಕನಾಗಿದ್ದ.

ತಲೆ ಮೇಲೆಯೆ ಲಾರಿ ಹರಿದ ಪರಿಣಾಮ ತಲೆ ನಜ್ಜುಗುಜ್ಜಾಗಿದೆ. ಹಾರುಬೂದಿ ಟ್ಯಾಂಕರ್‌ಗಳು ಸೇರಿ ಭಾರೀ ವಾಹನಗಳ ಸಂಚಾರ ಹೆಚ್ಚಾಗಿದ್ದು, ಪ್ರಯಾಣಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಭಾರೀ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Previous articleಕರ್ನಾಟಕ: ಶಾಲೆಗಳ ಪ್ರವೇಶದಲ್ಲಿ ಕುಸಿತ, ಅಂಕಿ-ಸಂಖ್ಯೆಗಳು
Next articleಬೆಂಗಳೂರು: 3000 ಬಿಎಂಟಿಸಿ ಬಸ್‌ಗಳ ವೇಳಾಪಟ್ಟಿ ಪರಿಷ್ಕರಣೆ

LEAVE A REPLY

Please enter your comment!
Please enter your name here