ನಿರೀಕ್ಷೆಗೂ ಮೀರಿ ಭಾರತದ ಆರ್ಥಿಕ ಬೆಳವಣಿಗೆ

0
40

ಅಮೆರಿಕ ಮತ್ತು ಭಾರತ ನಡುವಿನ ಸುಂಕ ಸಮರದ ಹೊರತಾಗಿಯೂ 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ 2025) ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 7.8% ರಷ್ಟು ಬೆಳವಣಿಗೆ ಕಂಡಿದೆ. ಆದರೆ ಈ ಬೆಳವಣಿಗೆಯು ಆರ್‌ಬಿಐ ಸೇರಿದಂತೆ ಹಲವಾರು ಸಂಸ್ಥೆಗಳ ಅಂದಾಜುಗಳನ್ನು ಮೀರಿದೆ. ಆರ್‌ಬಿಐ ಈ ಅವಧಿಗೆ 6.5%ರ ಆರ್ಥಿಕ ಬೆಳವಣಿಗೆ ಕಾಣಬಹುದು ಎಂದು ಅಂದಾಜಿಸಿತ್ತು. ಜಾಗತಿಕವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಜಿಡಿಪಿ ಬೆಳವಣಿಗೆ ಲೆಕ್ಕಾಚಾರ
ಸೇವಾ ವಲಯದ ಚೇತರಿಕೆ: ಭಾರತದ ಜಿಡಿಪಿಯ ಅರ್ಧಕ್ಕಿಂತ ಹೆಚ್ಚಿನ ಪಾಲು ಸೇವಾ ವಲಯದ್ದು. ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು (9.8%), ಹಣಕಾಸು, ಮತ್ತು ವೃತ್ತಿಪರ ಸೇವೆಗಳು (9.5%), ಮತ್ತು ವ್ಯಾಪಾರ, ಹೋಟೆಲ್‌ಗಳು, ಸಾರಿಗೆ ಮತ್ತು ಸಂವಹನ ಸೇವೆಗಳ ಒಟ್ಟು (8.6%) ಕಾರಣದಿಂದಾಗಿ ಸೇವಾ ವಲಯವು 9.3% ರಷ್ಟು ಬಲವಾದ ಬೆಳವಣಿಗೆ ಪ್ರದರ್ಶಿಸಿದೆ.

ಉತ್ಪಾದನಾ ವಲಯ: ಗಮನಾರ್ಹ ಸುಧಾರಣೆ ಕಂಡಿರುವ ಈ ವಲಯದಲ್ಲಿ ಹಿಂದಿನ ತ್ರೆöÊಮಾಸಿಕದಲ್ಲಿ ಶೇ. 4.8ಕ್ಕೆ ಹೋಲಿಸಿದರೆ ಶೇ. 7.7 ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಆತ್ಮನಿರ್ಭರದಂತಹ ಉಪಕ್ರಮಗಳ ಮೂಲಕ ಸ್ವಾವಲಂಬಿ ಉತ್ಪಾದನೆಗೆ ಸರ್ಕಾರ ಒತ್ತು ನೀಡಿರುವುದರಿಂದ ಜವಳಿ, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್‌ಗಳಂತಹ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಾಗಿದೆ.

ಕೃಷಿ ಮತ್ತು ಗ್ರಾಮೀಣ ಬೇಡಿಕೆ: ಗ್ರಾಮೀಣ ಯೋಜನೆಗಳ ಕೊಡುಗೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು, ಶೇ. 3.7 ರಷ್ಟು ಬಲವಾದ ಬೆಳವಣಿಗೆಯನ್ನು ತೋರಿಸಿದೆ.

ನಿರ್ಮಾಣ ವಲಯ: ರಿಯಲ್ ಎಸ್ಟೇಟ್ 7.6% ರಷ್ಟು ಬಲವಾದ ಬೆಳವಣಿಗೆಯನ್ನು ಕಾಯ್ದುಕೊಂಡಿದೆ.

ಬೆಳವಣಿಗೆಗೆ ಮುಖ್ಯ ಕಾರಣ
ದೇಶೀಯ ಬೇಡಿಕೆ: ತೆರಿಗೆ ವಿನಾಯತಿ ಮತ್ತು ಗ್ರಾಹಕ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಕಡಿತದಿಂದಾಗಿ ಬೇಡಿಕೆ ಹೆಚ್ಚಾಗಿದೆ.

ಹೂಡಿಕೆಯಲ್ಲಿ ಸುಧಾರಣೆ: ಒಟ್ಟು ಸ್ಥಿರ ಬಂಡವಾಳ ಹೂಡಿಕೆ (ಜಿಎಫ್‌ಸಿಎಫ್) 7.8% ರಷ್ಟು ಬೆಳವಣಿಗೆ ದಾಖಲಿಸಿದೆ.

ಸಾರ್ವಜನಿಕ ಹೂಡಿಕೆ: ಸರ್ಕಾರದ ಬಂಡವಾಳ ವೆಚ್ಚದ ಹೂಡಿಕೆಗಳಾದ ರಸ್ತೆ, ರೈಲ್ವೆöÊ ಮತ್ತು ಇಂಧನ ಮೂಲಸೌಕರ್ಯ ಯೋಜನೆಗಳು ಉದ್ಯೋಗ ಸೃಷ್ಟಿ ಅಲ್ಲದೇ ದೀರ್ಘ ಕಾಲೀನ ಬೆಳವಣಿಗೆಗೆ ಕಾರಣವಾಗಿವೆ.

ಜಾಗತಿಕ ಅನಿಶ್ಚಿತತೆಗಳು: ಈ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಜಾಗತಿಕ ಹಣಕಾಸು ಮಾರುಕಟ್ಟೆಯ ಏರಿಳಿತ ನಿರಂತರ ಅಪಾಯಗಳನ್ನು ಒಡ್ಡುತ್ತಿವೆ.

ಸಂಭಾವ್ಯ ಸವಾಲುಗಳು ಅಮೆರಿಕದ ತೆರಿಗೆ: ಭಾರತದ ಸರಕಿನ ಮೇಲೆ ಅಮೆರಿಕ 50% ತೆರಿಗೆಯನ್ನು ವಿಧಿಸಿದೆ. ಇದರಲ್ಲಿ ರಷ್ಯಾ ತೈಲ ಖರೀದಿ ಮೇಲಿನ ಸುಂಕವೂ ಸೇರಿದೆ.

ದೇಶಗಳ ಜಿಡಿಪಿ ಬೆಳವಣಿಗೆ (2025-26)
ಭಾರತ – 7.8%
ಚೀನಾ – 4.1%
ಬ್ರೆಜಿಲ್ – 3.2%
ಅಮೆರಿಕ – 2.4%
ಯುರೋಜೋನ್ – 1.3%
ಜಪಾನ್ – 1.5%
ಬ್ರಿಟನ್ – 0.7%

Previous articleಚಳಿಯಿದೆ, ದಿಂಬು-ಬ್ಲಾಂಕೆಟ್ ನೀಡಿ: ಕೋರ್ಟ್‌ಗೆ ದರ್ಶನ ಮನವಿ
Next articleವ್ಯಾಪಕ ಸುಂಕ ಹೇರಿಕೆಗೆ ಟ್ರಂಪ್‌ಗಿಲ್ಲ ಅಧಿಕಾರ!

LEAVE A REPLY

Please enter your comment!
Please enter your name here