40 ಕೋಟಿ ತೆರಿಗೆ ವಂಚನೆ: ಬೆಂಗಳೂರಿನ ಓರ್ವನ ಬಂಧನ

0
25

ಬೆಳಗಾವಿ: ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಬೆಳಗಾವಿ ವಲಯ ಘಟಕವು ಸುಮಾರು 145 ಕೋಟಿ ರೂ. ಮೌಲ್ಯದ ನಕಲಿ ಇನ್ ವಾಯ್ಸ್ ಗಳನ್ನು ನೀಡುವುದರ ಮೂಲಕ ಸುಮಾರು 43 ಕೋಟಿ ರೂ. ತೆರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.

ರಾಜಸ್ಥಾನ ಮೂಲದ ಬೆಂಗಳೂರು ನಿವಾಸಿ ಎಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ನಕಲಿ ದಾಖಲೆಗಳನ್ನು ಬಳಸಿಕೊಂಡು ಕೆಲವರು ನಕಲಿ ಜಿಎಸ್ಟಿ ನೋಂದಣಿಗಳನ್ನು ಸೃಷ್ಟಿಸಿ ನಕಲಿ ಐಟಿಸಿಯನ್ನು ಪಡೆದುಕೊಂಡು ರವಾನಿಸುವ ಚಟುವಟಿಕೆಯಲ್ಲಿ ನಿರತವಾಗಿದ್ದು ಗೊತ್ತಾಗಿತ್ತು.

ಆರೋಪಿಯ ವಿಚಾರಣೆ ಸಮಯದಲ್ಲಿ, ಅಧಿಕಾರಿಗಳು ಮೊಬೈಲ್ ಫೋನ್, ನಕಲಿ ದಾಖಲೆಗಳು, ನಕಲಿ ಆಧಾರ್ ಪತ್ರಗಳು ಮತ್ತು ನಕಲಿ ಘಟಕಗಳ ಸೈನ್ ಬೋರ್ಡಗಳ ಛಾಯಾ ಚಿತ್ರಗಳು ಸೇರಿದಂತೆ ಹಲವಾರು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನಕಲಿ ಇನ್ ವಾಯ್ಸ್ ಗಳು ಮತ್ತು ಇ-ವೇ ಬಿಲ್ಗಳನ್ನು ರಚಿಸಲು ವ್ಯಾಪಾರ ಕಾರ್ಯಾಚರಣೆಗಳಿಲ್ಲದ ಶೆಲ್ ಕಂಪನಿಗಳನ್ನು ಬಳಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಆರೋಪಿಯನ್ನು ಬೆಂಗಳೂರಿನಲ್ಲಿ 2017 ರ ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ಅಧಿಕಾರಿಗಳು ಬಂಧಿಸಿ ಆಂತರಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಆರೋಪಿಯನ್ನು ಬೆಳಗಾವಿಗೆ ವರ್ಗಾಯಿಸಲು ಟ್ರಾನ್ಸಿಟ್ ರಿಮಾಂಡ್ ಅನ್ನು ಪಡೆದು ಬೆಳಗಾವಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿಯನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ತನಿಖೆ ಮುಂದುವರೆದಿದೆ.

Previous articleBBMP ಭ್ರಷ್ಟಾಚಾರ: ಸಿಎಂಗೆ ತನಿಖಾ ವರದಿ ಸಲ್ಲಿಸಿದ ಆಯೋಗ
Next articleಫ್ಲೋರಿಡಾಕ್ಕೂ ಹಬ್ಬಿದ ಕೆಎಂಎಫ್‌ನ ‘ನಂದಿನಿ’ ತುಪ್ಪದ ಘಮ

LEAVE A REPLY

Please enter your comment!
Please enter your name here