ಗೋ ಪೂಜೆಯೊಂದಿಗೆ ರಾಜಕೀಯ ಚಟುವಟಿಕೆಗೆ ಚಾಲನೆ

0
16

ಬಳ್ಳಾರಿ:ಮಾಜಿ ಸಚಿವ ಜನಾರ್ಧನ ರೆಡ್ಡಿ ಪತ್ನಿ ಅರುಣ ಲಕ್ಷ್ಮಿ ತಮ್ಮ ನಿವಾಸದ ಮುಂದೆ ಗೋವಿಗೆ ಪೂಜೆ ಸಲ್ಲಿಸಿ, ಪ್ರಸಾದ ಅರ್ಪಿಸಿ ರಾಜಕೀಯ ಆರಂಭಿಸಿದ್ದಾರೆ.
ಅವ್ವಂಭಾವಿಯ ತಮ್ಮ ನಿವಾಸದ ಮುಂದೆ ಗೋವಿಗೆ ಪೂಜೆ ಸಲ್ಲಿಸಿ, ಬಾಳೆಹಣ್ಣು, ಬೆಲ್ಲ, ಅಕ್ಕಿ ಪ್ರಸಾದ ಅರ್ಪಿಸಿದರು. ಈ ವೇಳೆ ಮುಸ್ಲಿಂ ಯುವತಿಯರು ಗುಲಾಬಿ ಹೂ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡಿ ಶುಭ ಹಾರೈಸಿದರು.
ತದನಂತರ ತಾಲೂಕಿನ ಬೆಣಕಲ್ಲು ಗ್ರಾಮಕ್ಕೆ ತೆರಳಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಉಡಿ ತುಂಬಿಸಿಕೊಂಡರು.

Previous articleಮಹದಾಯಿ ವಿಚಾರದಲ್ಲಿ ಪ್ರತಿ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿ
Next articleಶ್ರೀ ಸಿದ್ಧೇಶ್ವರ ಸ್ವಾಮೀಜೀಯವರ ಆರೋಗ್ಯ ವಿಚಾರಿಸಿದ ನರೇಂದ್ರ ಮೋದಿಜಿ