ಕಲಬುರಗಿ: ಸಣ್ಣ ವರ್ತಕರಿಗೆ ದಂಡದ ಭೀತಿ, ಗ್ರಾಹಕರಿಗೆ ಫಜೀತಿ!

0
14

ಭೀಮಾಶಂಕರ ಫಿರೋಜಾಬಾದ್

ಕಲಬುರಗಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಈ ವಲಯಗಳಿಗೆ ವಾರ್ಷಿಕವಾಗಿ ನಿಗದಿಪಡಿಸಿದ ಯುಪಿಎ ಡಿಜಿಟಲ್‌ ಪಾವತಿ ಮಿತಿ (ಫೋನ್‌ ಪೇ, ಪೇಟಿಎಂ) ನಿಂದ ಹೆಚ್ಚು ವಹಿವಾಟು ನಡೆಸಿದ ಕಲಬುರಗಿ ವಿಭಾಗದ 410 ವಿವಿಧ ಅಂಗಡಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ನಿತ್ಯ ಬಳಕೆಯಾಗುವ ನಂದಿನಿ ಹಾಲಿನ ಮಳಿಗೆ, ತರಕಾರಿ ಮತ್ತು ಹೆಣ್ಣು ಮತ್ತು ಮಾಂಸದ ಅಂಗಡಿಗಳು ಸೇರಿ ನೋಟಿಸ್‌ ಜಾರಿಯಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಫೋನ್‌ಪೇ ಹೆಚ್ಚು ಸ್ವೀಕರಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ, ಸಣ್ಣ ವರ್ತಕರಿಗೆ ದಂಡದ ಭೀತಿ ಎದುರಾದರೆ, ಗ್ರಾಹಕರಿಗೆ ಕ್ಯಾಶಲೆಸ್‌ ವ್ಯವಹಾರಕ್ಕೆ ಕಡಿವಾಣ ಬಿದ್ದು
ಫಜೀತಿಗೆ ಸಿಲುಕಿದಂತಾಗಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿ ನೀಡಿರುವ ಅಂಕಿ ಅಂಶಗಳ ಪ್ರಕಾರ, ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ 2021 ರಿಂದ 2025ರವರೆಗೆ ಬೇಕು ಕಾಂಡಿಮೆಂಟ್ಸ್ 4 ನೋಟಿಸ್, ಹೋಟೆಲ್ ಮತ್ತು ಕ್ಯಾಂಟಿನ್ 40 ನೋಟಿಸ್, ಪಾನ್ ಶಾಪ್ 2, ಕಿರಾಣಿ ಅಂಗಡಿ 17, ನಂದಿನಿ ಮಳಿಗೆ, ತರಕಾರಿ, ಹಣ್ಣು ಮತ್ತು ಮಾಂಸದ ಅಂಗಡಿಗಳು 81, ಡಿಸೇಲ್, ಪೆಟ್ರೋಲ್ ಬಂಕ್ 5, ಬಾರ್ ಮತ್ತು ರೆಸ್ಟೋರೆಂಟ್ 11, ಆಸ್ಪತ್ರೆ, ಕ್ಲಿನಿಕ್‌ಗಳು 15, ಶೈಕ್ಷಣಿಕ ಸಂಸ್ಥೆಗಳು, ಟ್ರಸ್ಟ್‌ಗಳು 1, ಆಟೋಮೊಬೈಲ್ 1, ಚಿನ್ನಾಭರಣ ಶೋರೂಂ 1, ಮದ್ಯ ಮಳಿಗೆ 30, ಇತರೆ 200 ಸೇರಿ ಒಟ್ಟು 410 ಅಂಗಡಿಗಳಿಗೆ ನೋಟಿಸ್ ನೀಡಿದ್ದರಿಂದ ವರ್ತಕರಿಗೆ ಭಯ ಶುರುವಾಗಿದೆ.

ಬೀದರ್ 182, ಕಲಬುರಗಿ 149, ಯಾದಗಿರಿ 30 ಮತ್ತು ರಾಯಚೂರು 61 ಅಂಗಡಿಗಳಿಗೆ ನೋಟಿಸ್ ನೀಡಿ, ಮೂರು ತಿಂಗಳ ಕಾಲಾವಕಾಶದೊಳಗೆ ಪೂರಕ ದಾಖಲೆಗಳೊಂದಿಗೆ ಕಚೇರಿಗೆ ಬಂದು ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ. ನಿಗದಿತ ಸಮಯದಲ್ಲಿ ಸಕಾಲಕ್ಕೆ ವಿವರಣೆ ನೀಡದಿದ್ದರೆ ವಹಿವಾಟಿನ ಲೆಕ್ಕ ಆಧರಿಸಿ ಪ್ರತಿದಿನ ಸೇವೆಗೆ 25 ರೂ. ಮತ್ತು ಸರಕಿಗೆ 50 ರೂ. ದಂಡ ವಿಧಿಸಲಾಗುತ್ತದೆ ಎನ್ನುತ್ತವೆ ಬಲ್ಲ ಮೂಲಗಳು.

ಸೇವಾ ವಲಯಕ್ಕೆ 20 ಲಕ್ಷ ರೂ. ಸರಕು ವಲಯಕ್ಕೆ 40 ಲಕ್ಷ ರೂ. ವಾರ್ಷಿಕ ವಹಿವಾಟ ಮಿತಿ ನಿಗದಿಪಡಿಸಲಾಗಿದೆ. ಜಿಎಸ್‌ಟಿ ತೆರಿಗೆಗಳ್ಳರಿಗೆ ಮೈಚಳಿ ಉಂಟಾಗಿದೆ. ಅಲ್ಲದೆ ಸಣ್ಣ ವರ್ತಕರ, ವ್ಯಾಪಾರಿಗಳ ಸ್ಪಷ್ಟ ಆದಾಯ ತೆರಿಗೆ ಗೊತ್ತಾಗುವುದಲ್ಲದೆ, ಬಿಪಿಎಲ್ ಕಾರ್ಡ್ ಇತರೆ ಸವಲತ್ತುಗಳು ಕಡಿತಗೊಳ್ಳುವ ಸಾಧ್ಯತೆಗಳಿವೆ.

ಗ್ರಾಹಕರು ಕೇಳಿದಾಗ ಮಾತ್ರ ಬಿಲ್: ಕಿರಾಣಿ ಅಂಗಡಿ, ಚಹಾ ಅಂಗಡಿ, ಸಣ್ಣ ಹೋಟೆಲ್, ಮೆಡಿಕಲ್‌, ಪೆಟ್ರೋಲ್‌ ಬಂಕ್ ಸೇರಿ ಬಹುತೇಕ ಕಡೆ ಗ್ರಾಹಕರು ಬಿಲ್ ಕೇಳಿದಾಗ ಮಾತ್ರ ನೀಡುತ್ತಾರೆ. ಇಲ್ಲಿ ಗ್ರಾಹಕರು ಕೇಳದಿದ್ದರೂ ಕಡ್ಡಾಯವಾಗಿ ಬಿಲ್ ಪಡೆಯುವ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಗ್ರಾಹಕರು.

“ಈಗಾಗಲೇ ಸಿಂಧನೂರಿನಲ್ಲಿ ಸಣ್ಣ ವರ್ತಕರು, ಈಗ ತಮಗೆ ಸಲಹೆಗಾರರಿಗೆ ಜಿಎಸ್‌ಟಿ ನೋಂದಣಿ ಸಾಧಕ-ಬಾಧಕ ಬಗ್ಗೆ ಅರಿವು ಮೂಡಿಸಲಾಗಿದ್ದು, ಶೀಘ್ರದಲ್ಲಿ ಕಲಬುರಗಿಯಲ್ಲೂ ಜಾಗೃತಿ ಮಾಡಲಾಗುವುದು, ವ್ಯಾಪ್ತಿ ಮೇರಿ ಡಿಜಿಟಲ್ ವಹಿವಾಟು ನಡೆಸಿದು ಕಂಡುಬಂದರೆ ಜಿಎಸ್‌ಟಿ ನೋಂದಣಿ ಜತೆ ದಂಡ ಸಹ ವಿಧಿಸಲಾಗುವುದು” ಎಂದು ಟಿ. ಬಾಲಸ್ವಾಮಿ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ(ಆಡಳಿತ), ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆ, ಕಲಬುರಗಿ ವಿಭಾಗ ಹೇಳಿದ್ದಾರೆ.

Previous articleಮೈಸೂರು: ಇಲವಾಲದ ಆರ್‌ಎಂಪಿ ಕ್ಯಾಂಪಸ್‍ನಲ್ಲಿ ಹುಲಿ ಪ್ರತ್ಯಕ್ಷ
Next articleಬೆಳಗಾವಿ: ಸೆಪ್ಟೆಂಬರ್‌ನಿಂದ ಗೋಕಾಕ್ ಇಂಜಿನಿಯರಿಂಗ್ ಕಾಲೇಜು ಆರಂಭ

LEAVE A REPLY

Please enter your comment!
Please enter your name here