ಮಂಗಳೂರು: ರುಶಭ್ ರಾವ್‌ಗೆ ‘ಸೂಪರ್ ಟ್ಯಾಲೆಂಟ್ ಪ್ರಶಸ್ತಿ’

0
28

ಮಂಗಳೂರು: ಮಂಗಳೂರಿನ ಕುಲಶೇಖರದ ಬಾಲ ಪ್ರತಿಭೆ ರುಶಭ್ ರಾವ್ ‘ಸೂಪರ್ ಟ್ಯಾಲೆಂಟ್ ಪ್ರಶಸ್ತಿ’ಯನ್ನೂ ಮುಡಿಗೇರಿಸಿಕೊಂಡಿದ್ದಾರೆ .ಈತ ಬಿಜೈನ ಲೂರ್ಡ್ಸ್ ಶಾಲೆಯ ೩ನೇ ತರಗತಿ ವಿದ್ಯಾರ್ಥಿ. ಫ್ಯಾಷನ್ ರನ್ ವೇ ಇಂಟರ್ ನ್ಯಾಷನಲ್ ವತಿಯಿಂದ ವಿಯೇಟ್ನಾಂನಲ್ಲಿ ಆ.13 ರಿಂದ 17 ರವರಗೆ ಜರುಗಿದ ಅಂತಾರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ರುಶಭ್ ರಾವ್ ಅವರು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಸ್ಪರ್ಧೆಯ ಪ್ರಿನ್ಸ್ ಕೆಟಗರಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ರುಶಭ್ ಮಾರ್ಗದರ್ಶಕ, ನಟ – ನಿರ್ದೇಶಕ ರಾಹುಲ್ ಅಮೀನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರುಶಬ್ ಇದಕ್ಕೂ ಮೊದಲು ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ‘ಜ್ಯೂನಿಯರ್ ಇಂಟರ್‌ನ್ಯಾಷನಲ್ ಮೋಡೆಲ್ ಫ್ಯಾಷನ್ ಶೋ ಕಾಂಪಿಟೀಶನ್’ನಲ್ಲಿ ಪ್ರಿನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದವರು ಹೇಳಿದರು.

ತಂದೆ ರಕ್ಷಿತ್ ರಾವ್ ಮಾತನಾಡಿ, ರುಶಭ್ ನಾಲ್ಕನೇ ವಯಸ್ಸಿಗೆ ನೃತ್ಯ ಕಲಿಯಲು ಆರಂಭಿಸಿ, ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ. ಬಳಿಕ ಅಭಿನಯದಲ್ಲಿ ಅವಕಾಶ ಲಭಿಸಿದ್ದು, ಮೂರು ತುಳು ಚಲನಚಿತ್ರ ಮತ್ತು ಒಂದು ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದಾನೆ ಎಂದರು.

ಸುದ್ದಿಗೋಷ್ಠಿಯಲ್ಲಿ ನ್ಯಾಷನಲ್ ಡೈರೆಕ್ಟರ್ ಯಶಸ್ವಿನಿ ದೇವಾಡಿಗ, ನೃತ್ಯ- ಟ್ಯಾಲೆಂಟ್ ರೌಂಡ್‌ಗೆ ತರಬೇತಿ ನೀಡಿದ ನವೀನ್ ಶೆಟ್ಟಿ, ವಸ್ತ್ರ ವಿನ್ಯಾಸಕಿ ವರ್ಷಾ ವಿ.ಆಚಾರ್ಯ, ತಾಯಿ ಅಶ್ವಿನಿ ಉಪಸ್ಥಿತರಿದ್ದರು.

Previous articleವಿಜಯನಗರ: ಜೇಡಿಮಣ್ಣಿನಿಂದ ಮನಮೋಹಕ ಸಿದ್ಧಿವಿನಾಯಕ ಸಿದ್ಧ
Next articleಬೆಳಗಾವಿ: ಮಹಾರಾಷ್ಟ್ರದಿಂದ ನೀರು, ಪ್ರವಾಹಕ್ಕೆ ಕೊಚ್ಚಿಹೋದ ರಸ್ತೆ

LEAVE A REPLY

Please enter your comment!
Please enter your name here