ಆದಾಯ ತೆರಿಗೆ: ಮಧ್ಯಮ ವರ್ಗದಲ್ಲೇ ಅಚ್ಚರಿಯ ಅಸಮಾನತೆ

0
51

2024-25ನೇ ಸಾಲಿನ ಆದಾಯ ತೆರಿಗೆ ಅಂಶಗಳಿಂದ ದೇಶದ ಮಧ್ಯಮ ವರ್ಗದಲ್ಲಿ ಅಚ್ಚರಿಯ ಅಸಮಾನತೆ ಇರುವುದು ಬಹಿರಂಗವಾಗಿದೆ. 12ರಿಂದ 50 ಲಕ್ಷ ರೂ. ವರೆಗೆ ಆದಾಯ ಇರುವ ತೆರಿಗೆದಾರರ ಪಟ್ಟಿಯಲ್ಲಿ ಜಾರ್ಖಂಡ್ ಈಗ ಗುಜರಾತನ್ನು ಹಿಂದಿಕ್ಕಿದೆ. ಭಾರತೀಯ ತೆರಿಗೆದಾರರಲ್ಲಿ ಹೆಚ್ಚಿನವರು ಇನ್ನೂ ವಾರ್ಷಿಕ 7.5 ಲಕ್ಷ ರೂ. ಗಿಂತಲೂ ಕಡಿಮೆ ಆದಾಯ ಗಳಿಸುವವರು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರರಿದ್ದಾರೆ. ಇವರೆಲ್ಲರೂ ವಾರ್ಷಿಕ ಆದಾಯ 25 ಲಕ್ಷದಿಂದ 50 ಲಕ್ಷ ರೂ. ಗಳಿಸಿದವರು.

10ನೇ ಸ್ಥಾನದಲ್ಲೂ ಇಲ್ಲದ ಶ್ರೀಮಂತ ಗುಜರಾತ್: ಜಾರ್ಖಂಡ್‌ನಲ್ಲಿ ಶೇ. 20ಕ್ಕಿಂತ ಹೆಚ್ಚಿನ ಜನರು ವಾರ್ಷಿಕ ಆದಾಯ 12 ಲಕ್ಷದಿಂದ 50 ಲಕ್ಷ ರೂ. ಹೊಂದಿದ್ದರೆಂದು ಘೋಷಿಸಲಾಗಿದೆ. ಆದರೇ ಶ್ರೀಮಂತ ರಾಜ್ಯವೆಂದು ಪರಿಗಣಿಸುವ ಗುಜರಾತನಲ್ಲಿ ಕೇವಲ ಶೇ. 7ರಷ್ಟು ಜನ ಉತ್ತಮ ವಾರ್ಷಿಕ ಆದಾಯ ಹೊಂದಿದ್ದಾರೆ. ಹಾಗೇ ನೋಡಿದರೆ ವಾರ್ಷಿಕ ಆದಾಯ 25 ರಿಂದ 50 ಲಕ್ಷ ರೂ. ಹೊಂದಿರುವ ಟಾಪ್ 10 ಪಟ್ಟಿಯಲ್ಲೂ ಸಹ ಗುಜರಾತ್ ಸ್ಥಾನ ಪಡೆದಿಲ್ಲ. ಉತ್ತಮ ವಾರ್ಷಿಕ ಆದಾಯ ಹೊಂದಿದವರ ಕ್ಷೇತ್ರದಲ್ಲಿ ಮಹಾರಾಷ್ಟ್ರ ಹೆಚ್ಚಿನ ಪ್ರಾಬಲ್ಯ ಹೊಂದಿದೆ ಎಂಬುದು ಗಮನಾರ್ಹ.

ಹೆಚ್ಚಿನ ಮಧ್ಯಮ ವರ್ಗದವರ ಆದಾಯ 7.5 ಲಕ್ಷ: ದೇಶದಲ್ಲಿ ವಾರ್ಷಿಕ ಆದಾಯ ಕೇವಲ 2.5 ಲಕ್ಷದಿಂದ 7.5 ಲಕ್ಷ ಆದಾಯ ಇರುವ ಮಾಧ್ಯಮ ವರ್ಗದಲ್ಲಿ ಅತಿಹೆಚ್ಚಿನ ತೆರಿಗೆ ಸಲ್ಲಿಕೆದಾರರಿದ್ದಾರೆ. ಶೇ. 2.5 ಜನರು ಮಾತ್ರ 25 ಲಕ್ಷ ಆದಾಯ ಹೊಂದಿದ್ದಾರೆ.

ಮಹಾರಾಷ್ಟ್ರದಲ್ಲಿ 46 ಲಕ್ಷಕ್ಕೂ ಹೆಚ್ಚು ತೆರಿಗೆ ರಿಟರ್ನ್ ಸಲ್ಲಿಕೆಯಾಗುವುದರೊಂದಿಗೆ ದೇಶದಲ್ಲೇ ಅತಿಹೆಚ್ಚು ತೆರಿಗೆ ರಿಟರ್ನ್ ಸಲ್ಲಿಕೆಯಾಗುವ ರಾಜ್ಯವೆಂದು ಗುರುತಿಸಲ್ಪಟ್ಟಿದೆ. ಜನಸಂಖ್ಯೆಯಾಧಾರಿತವಾಗಿ ದೆಹಲಿಯು ಅತಿಹೆಚ್ಚು ತೆರಿಗೆದಾರರಿರುವ ರಾಜ್ಯವಾಗಿದೆ. ರಾಷ್ಟ್ರೀಯವಾಗಿ ಈ ರಾಜ್ಯದ ಜನಸಂಖ್ಯೆಯ ಶೇ. 3ರಷ್ಟು ಮಂದಿ ತೆರಿಗೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಇರುವ ಉತ್ತರಪ್ರದೇಶವು ಎರಡನೇ ಅತಿಹೆಚ್ಚು ತೆರಿಗೆ ರಿಟರ್ನ್ಸ್ ಸಲ್ಲಿಸುವ ರಾಜ್ಯವಾಗಿದೆ. ದೇಶಕ್ಕೆ ಹೋಲಿಸಿದ್ದಲ್ಲಿ ಅದರ ಪಾಲು ಶೇ. 1.2ರಷ್ಟು ಮಾತ್ರ.

Previous articleಶಾಸಕ ಪ್ರಕಾಶ ಕೋಳಿವಾಡ ಆಪ್ತ ಸಹಾಯಕ ಮನೆಯಲ್ಲಿ ಕಳ್ಳತನ
Next articleಮೈಸೂರು ದಸರಾ 2025: ಬೂಕರ್ ಪುರಸ್ಕೃತ ಬಾನು‌ ಮುಷ್ತಾಕ್‌ರಿಂದ ದಸರಾ ಉದ್ಘಾಟನೆ

LEAVE A REPLY

Please enter your comment!
Please enter your name here