ತಗ್ಗಲಿದೆ ಜಿಎಸ್‌ಟಿ ಹೊರೆ: ದೀಪಾವಳಿ ಹಬ್ಬಕ್ಕೆ ದೊಡ್ಡ ಉಡುಗೊರೆ, ಮೋದಿ ಘೋಷಣೆ

0
131

ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಹುದೊಡ್ಡ ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು. ದೇಶದ ಜನತೆಗೆ ಜಿಎಸ್‌ಟಿ ವಿಚಾರದಲ್ಲಿ ದೊಡ್ಡ ಉಡುಗೊರೆ​ ನೀಡುವುದಾಗಿ ತಿಳಿಸಿದ್ದಾರೆ.

ಜನರ ಜೀವನವನ್ನು ಸುಲಭಗೊಳಿಸುವ ಹಾಗೂ ಆರ್ಥಿಕತೆಯನ್ನು ಬಲಪಡಿಸುವ ಹೊಸ, ಸರಳೀಕೃತ ಜಿಎಸ್‌ಟಿ ವ್ಯವಸ್ಥೆ ನೋಡಲಿದ್ದೀರಿ ಇದು ಕೇಂದ್ರ ಸರ್ಕಾರದ ದೀಪಾವಳಿ ಹಬ್ಬದ ಉಡುಗೊರೆ ಎಂದು ಅವರು ಬಣ್ಣಿಸಿದ್ದಾರೆ.

ಪ್ರಮುಖ ಜಿಎಸ್‌ಟಿ ಸುಧಾರಣೆ ಮತ್ತು ಸರಳೀಕೃತ ತೆರಿಗೆಗಳನ್ನು ಕಳೆದ ಎಂಟು ವರ್ಷಗಳಲ್ಲಿ ನಾವು ಜಾರಿಗೊಳಿಸಿದ್ದೇವೆ. ಸದ್ಯ ಅದರ ಪರಿಶೀಲನೆಗೆ ಕಾಲ ಕೂಡಿ ಬಂದಿದೆ. ಅದನ್ನು ಪರಿಶೀಲಿಸಿದ್ದೇವೆ. ಇ ಕುರಿತು ರಾಜ್ಯಗಳೊಂದಿಗೆ ಮಾತನಾಡಿದ್ದೇವೆ. ಇದರಿಂದ ಕೈಗಾರಿಕೆಗಳು ದೊಡ್ಡ ಲಾಭ ಪಡೆಯಲಿವೆ. ದೈನಂದಿನ ವಸ್ತುಗಳು ಕಡಿಮೆಯಾಗಲಿವೆ, ದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದರು.

ವೂಕಲ್ ಫಾರ್ ಲೋಕಲ್​​ ಎಲ್ಲಾ ಭಾರತೀಯರ ಮಂತ್ರವಾಗಬೇಕು. ಸ್ವದೇಶಿ ಉತ್ಪನ್ನಗಳಿಗೆ ತಾಕತ್ತನ್ನು ಬಳಸಬೇಕಾಗಿದೆ. ನಮ್ಮ ಭಾರತೀಯರು ಸಿದ್ಧಪಡಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಮುಂದಾಗಬೇಕು. ಇದರಿಂದ ದೇಶವವು ಕೆಲ ದಿನಗಳಲ್ಲಿ ಬದಲಾವಣೆ ಕಾಣಲಿದೆ ಎಂದರು.

ದೇಶಿಕರಣದಿಂದ ಯಾರ ಮುಂದೆಯೂ ನಾವು ತಲೆ ಬಾಗಬೇಕಿಲ್ಲ. ಆತ್ಮನಿರ್ಭರ ಎಂದರೆ ನಮ್ಮ ಶಕ್ತಿ ಸಾಮರ್ಥ್ಯ, ಅದು ಕೇವಲ ಆಮದು ರಪ್ತು ಅಲ್ಲ, ಭಾರತ ಅಭಿವೃದ್ಧಿ ಹೊಂದಬೇಕಾದರೆ ಆತ್ಮನಿರ್ಭರತೆ ಅನಿವಾರ್ಯ. ಸ್ವಂತ ಶಕ್ತಿಯ ಮೇಲೆ ಭಾರತ ಅವಲಂಬಿತವಾಗಬೇಕು. ಯುವಕರಿಗೆ ತಮ್ಮ ಆಲೋಚನೆಗಳನ್ನು ಎಂದಿಗೂ ಸಾಯಲು ಬಿಡಬೇಡಿ. ನಿಮ್ಮೊಂದಿಗೆ ನಿಲ್ಲುತ್ತೇನೆ ನಾವು ನಿಲ್ಲುತ್ತೇವೆ ಎಂದರು.

ಇಂದಿರಾ ಗಾಂಧಿ ದಾಖಲೆ ಹಿಂದಿಕ್ಕಿದ ಮೋದಿ: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸತತ 12ನೇ ಬಾರಿಗೆ ಧ್ವಜಾರೋಹಣ ಭಾಷಣ ಮಾಡುವ ಮೂಲಕ ಇಂದಿರಾ ಗಾಂಧಿಯವರ ದಾಖಲೆ ಮುರಿದಿದ್ದಾರೆ.

1966ರ ಜನವರಿಯಿಂದ 1977ರ ಮಾರ್ಚ್‌ ವರೆಗೆ ಮತ್ತು 1980ರ ಜನವರಿಯಿಂದ 1984ರ ಅಕ್ಟೋಬರ್‌ವರೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಅವಧಿಯಲ್ಲಿ ಒಟ್ಟು 16 ಬಾರಿ ಧ್ವಜಾರೋಹಣ ಭಾಷಣವನ್ನು ಮಾಡಿದ್ದು, ಇದರಲ್ಲಿ ಇಂದಿರಾ ಸತತವಾಗಿ 11 ಸಲ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಭಾಷಣ ಮಾಡಿದ್ದರು.

ದೇಶದಲ್ಲಿ 1947‌ ರಿಂದ 1963ರ ವರೆಗೆ ಪ್ರಧಾನ ಮಂತ್ರಿಯಾಗಿದ್ದ ಜವಹರಲಾಲ್ ನೆಹರೂ ಅವರು ಒಟ್ಟು 17 ಬಾರಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ಆದರೆ ಸ್ವಾತಂತ್ರ್ಯೋತ್ಸವದ ದಿನದಂದು ಹೆಚ್ಚು ಸಮಯ ಭಾಷಣ ಮಾಡಿದ ದಾಖಲೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿದೆ.

Previous articleಕಲಬುರಗಿ: ತ್ರಿವಿಧ ದಾಸೋಹಿ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ
Next articleʼಗ್ಯಾರಂಟಿʼ ಕೊಂಡಾಡಿದ ಸಿಎಂ: ಸ್ವಾತಂತ್ರ್ಯೋತ್ಸವ ಭಾಷಣದ ಹೈಲೆಟ್ಸ್!

LEAVE A REPLY

Please enter your comment!
Please enter your name here