ಆರೋಗ್ಯ, ಶಿಕ್ಷಣ ವ್ಯಾಪಾರೀಕರಣವಾಗಿದೆ: ಮೋಹನ್ ಭಾಗವತ್

0
67

ನವದೆಹಲಿ: ಆರೋಗ್ಯ ಮತ್ತು ಶಿಕ್ಷಣ ಈ ಎರಡೂ ಇಂದಿನ ಸಮಾಜದಲ್ಲಿ ಬಹಳ ಅವಶ್ಯಕ ಆಗಿರುವ ಪ್ರಮುಖ ವಿಷಯಗಳಾಗಿವೆ. ಸರ್ವಕಾಲಕ್ಕು ಆರೋಗ್ಯ ಮತ್ತು ಶಿಕ್ಷಣ ವ್ಯಕ್ತಿಯ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿವೆ. ಆದರೆ ದುರದೃಷ್ಟವಶಾತ್, ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು ವಾಣಿಜ್ಯೀಕರಣಗೊಂಡಿವೆ, ವ್ಯಾಪಾರೀಕರಣಗೊಂಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದೋರ್‌ನಲ್ಲಿ ಭಾನುವಾರ ಮಾಧವ ಸೃಷ್ಟಿ ಕ್ಯಾನ್ಸರ್ ಆರೈಕೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸಾಮಾನ್ಯ ಜನರಿಗೆ ಆರೋಗ್ಯ ಮತ್ತು ಶಿಕ್ಷಣಗಳು ಸುಲಭದಲ್ಲಿ ಸಿಗುವ ಪ್ರವೇಶ ಸಾಧ್ಯತೆ ಕ್ಲಿಷ್ಟವಾಗುತ್ತಿದೆ. ಒಂದು ಕಾಲದಲ್ಲಿ ಸೇವಾ ಕಾರ್ಯಗಳೆಂದು ಪರಿಗಣಿಸಲಾಗಿದ್ದ ಎರಡೂ ವಲಯಗಳು ಈಗ ಸಾಮಾನ್ಯ ಜನರಿಗೆ ಕೈಗೆ ಎಟುಕುವಂತಿಲ್ಲ ಮತ್ತು ಪ್ರವೇಶಿಸಲು ಆಗುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

“ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಅಗತ್ಯವನ್ನು ಎಲ್ಲರೂ ಬಯುಸುತ್ತಾರೆ. ಆದರೆ ಎರಡೂ ಸಾಮಾನ್ಯ ಜನರ ಆರ್ಥಿಕ ಸಾಮರ್ಥ್ಯಗಳಿಂದ ದೂರ ಇವೆ. ಅವು ಸುಲಭವಾಗಿ ಪ್ರವೇಶಿಸಲು ಮತ್ತು ಕೈಗೆಟುಕಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು ಹೆಚ್ಚುತ್ತಿವೆ ಆದರೆ ಈಗ ಅವು ಸಾಮಾನ್ಯ ಜನರ ಸಾಮರ್ಥ್ಯದಿಂದ ಹೊರಗಿವೆ. ಏಕೆಂದರೆ ಮೊದಲು ಅವುಗಳನ್ನು ಸೇವೆಯ ಉದ್ದೇಶದಿಂದ ಒದಗಿಸಲಾಗಿತ್ತಿತ್ತು. ಆದರೆ ಈಗ ಅವುಗಳನ್ನು ವಾಣಿಜ್ಯೀಕರಣ ಗೊಳಿಸಲಾಗಿದೆ” ಎಂದರು.

ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಸಂಸ್ಥೆಗಳೊಂದಿಗೆ ಸೇವೆಯ ಕಲ್ಪನೆಯನ್ನು ಪುನಃ ಸ್ಥಾಪಿಸುವ ಅಗತ್ಯವನ್ನು ವಿವರಿಸಿದರು. “ಸಮಾಜಕ್ಕೆ ಸರಳ ಮತ್ತು ಸುಲಭವಾಗಿ ಸಿಗುವಂತಹ ವೈದ್ಯಕೀಯ ಚಿಕಿತ್ಸೆ ಬೇಕು. ವಾಣಿಜ್ಯೀಕರಣದಿಂದಾಗಿ ಕೇಂದ್ರೀಕರಣವೂ ಸಂಭವಿಸುತ್ತದೆ. ಇದು ನಿಗಮಗಳ ಯುಗ, ಆದ್ದರಿಂದ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದರು.

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. “ದೇಶದಲ್ಲಿ 8-10 ನಗರಗಳಲ್ಲಿ ಮಾತ್ರ ಉತ್ತಮ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ. ಆದರೆ ರೋಗಿಗಳು ಅಲ್ಲಿಗೆ ಹೋಗಲು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡ ಬೇಕಾಗುತ್ತದೆ” ಎಂದರು.

“ಆಸ್ಪತ್ರೆಗಳು ಮತ್ತು ಶಾಲೆಗಳ ಕೊರತೆ ಇಲ್ಲ ಆದರೂ, ಇವುಗಳನ್ನು ಮೊದಲು ಸೇವೆ ಎಂದು ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಾಮಾನ್ಯ ಜನರ ವ್ಯಾಪ್ತಿಯೊಳಗೆ ಇದ್ದವು. ಆದರೆ ಇಂದು ವಾಣಿಜ್ಯೀಕರಣಗೊಂಡು ಬಹು ದುಬಾರಿಯಾಗಿದೆ” ಎಂದು ತಿಳಿಸಿದರು.

“ಕೆಲವು ವರ್ಷಗಳ ಹಿಂದೆ ಒಬ್ಬ ಸಚಿವರ ಮಾತಿನಲ್ಲಿ ನಾನು ಕೇಳಿದ್ದೇನೆ, ಭಾರತೀಯ ಶಿಕ್ಷಣವು ಒಂದು ಟ್ರಿಲಿಯನ್ ಡಾಲರ್ ವ್ಯವಹಾರವಾಗಿದೆ. ಇದು ಸಂಬಳ ಹೊಂದಿರುವ ಸಾಮಾನ್ಯ ಮನುಷ್ಯನಿಗೆ ತಲುಪಲು ಸಾಧ್ಯವಿಲ್ಲ. ಮೊದಲು, ಶಿಕ್ಷಣ ನೀಡುವುದನ್ನು ಅವರ ಕರ್ತವ್ಯವೆಂದು ಪರಿಗಣಿಸಲಾಗುತ್ತಿತ್ತು. ಈಗ, ಅದಕ್ಕೆ ಎಷ್ಟು ವೆಚ್ಚವಾಗುತ್ತದೆ? ಎಂದು ನೀವು ಅಂದಾಜು ಮಾಡಬೇಕು” ಎಂದರು.

Previous articleಕರ್ನಾಟಕ ಮುಂಗಾರು ಅಧಿವೇಶನ: 18 ಶಾಸಕರ ಅಮಾನತು ವಾಪಸ್
Next articleBDA Flat: ಬೆಂಗಳೂರಲ್ಲಿ ಮನೆ ಕೊಳ್ಳುವವರಿಗೆ ಗುಡ್ ನ್ಯೂಸ್, ಬಿಡಿಎ ಫ್ಲಾಟ್ ಮೇಳ

LEAVE A REPLY

Please enter your comment!
Please enter your name here