NISAR ಬಳಿಕ ಅಮೆರಿಕ ನಿರ್ಮಿತ ಬಹು ತೂಕದ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ

0
84

ಬೆಂಗಳೂರು: ಇಸ್ರೋ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಇದರಿಂದ ಭಾರತ ಮತ್ತು ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ನೆರವಾಗಲಿದೆ. ಇದರ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಮೆರಿಕ ನಿರ್ಮಿಸಿರುವ ಬಹುದೊಡ್ಡ ಉಪಗ್ರಹ 6,500 ಕೆ.ಜಿ. ತೂಕದ ಉಪಗ್ರಹವನ್ನು ಅದು ತನ್ನದೇ ಲಾಂಚರ್‌ನಲ್ಲಿ ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.

ಚೆನ್ನೈ ಬಳಿಯ ಕಟ್ಟಂಕುಳತ್ತೂರ್‌ನ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ 21ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಾರಾಯಣನ್ ಭಾಗಿಯಾಗಿ ಮಾತನಾಡಿದ ಅವರು ‘ಇಸ್ರೋ ಹಾಗೂ ಅಮೆರಿಕದ ನಾಸಾದ ‘ಸಿಂಥೆಟಿಕ್ ಅಪಾರ್ಚರ್ ರೇಡಾರ್’ (ಎನ್‌ಐಎಸ್‌ಎಆರ್) ಎಂಬ ಜಂಟಿ ಕಾರ್ಯಕ್ರಮದಡಿ ಜುಲೈ 30 ರಂದು ಜಿಎಸ್‌ಎಲ್‌ವಿ-ಎಫ್ 16 ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಇನ್ನು ಕೆಲವೇ ತಿಂಗಳಲ್ಲಿ ಅಮೆರಿಕದ ಮತ್ತೊಂದು ರಾಕೆಟ್ ಅನ್ನು ಇಸ್ರೋ ಉಡಾವಣೆ ಮಾಡಲಿದೆ. ಈ ಕಾರ್ಯಾಚರಣೆಯು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಅದ್ಭುತ ಪ್ರಗತಿಯನ್ನು ತೋರಿಸುತ್ತದೆ ಎಂದಿದ್ದಾರೆ.

ಎಲ್‌ವಿಎಮ್3 (ಜಿ‌ಎಸ್‌ಎಲ್‌ವಿ ಮಾರ್ಕ್ 3) ಭಾರ ಹೊರುವ ಉಡಾವಣಾ ವಾಹನದ ಮೂಲಕ ಮುಂದಿನ ಕೆಲವು ತಿಂಗಳಲ್ಲಿ ಉಡಾವಣೆ ನಡೆಯಲಿದೆ. ಬ್ಲೂಬರ್ಡ್ ಬ್ಲಾಕ್–2 ಎಂಬ ಹೆಸರಿನ ಈ ಉಪಗ್ರಹವನ್ನು ಅಮೆರಿಕದ AST SpaceMobile ಅಭಿವೃದ್ಧಿ ಪಡಿಸಿದೆ. ದೈತ್ಯ ಆಂಟೆನಾವನ್ನು ಹೊಂದಿರುವ ಈ ಕಡಿಮೆ ಭೂಮಿಯ ಕಕ್ಷೆಯ ಉಪಗ್ರಹವು ಯಾವುದೇ ವಿಶೇಷ ಸಾಧನಗಳ ಅವಶ್ಯಕತೆ ಇಲ್ಲದೆ ನೇರವಾಗಿ ಸಾಮಾನ್ಯ ಸ್ಮಾರ್ಟ್‌ ಫೋನ್‌ಗಳಿಗೆ ಬ್ರಾಡ್‌ ಬ್ಯಾಂಡ್ ಮತ್ತು ಧ್ವನಿ ಸಂಪರ್ಕವನ್ನು ಒದಗಿಸಲಿದೆ.

ಈ ಮಿಷನ್ ಮೂಲಕ ಭಾರತವು ಭಾರೀ ಅಂತರ ರಾಷ್ಟ್ರೀಯ ವಾಣಿಜ್ಯ ಉಪಗ್ರಹ ಉಡಾವಣೆ ಸಾಮರ್ಥ್ಯವನ್ನು ಮತ್ತಷ್ಟು ಸಾಬೀತುಪಡಿಸಲಿದೆ ಮತ್ತು ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲಿದೆ. ಇಸ್ರೋ ಈವರೆಗೆ ಉಡಾವಣೆ ಮಾಡಿರುವ ಅತೀ ತೂಕದ ಉಪಗ್ರಹವೆಂದರೆ 2018 ರಲ್ಲಿ ಉಡಾವಣೆಯಾದ ಜಿಸ್ಯಾಟ್-11, ಇದು 5,854 ಕೆ.ಜಿ. ತೂಕ ಹೊಂದಿದೆ.

ಇನ್ನು ವಿಶ್ವದಲ್ಲೇ ಅತಿ ಹೆಚ್ಚು ತೂಕದ ಉಪಗ್ರಹ ಸ್ಪೇಸ್ ಎಕ್ಸ್ ಉಡಾವಣೆ ಜ್ಯೂಪಿಟರ್-3 ಆಗಿದ್ದು, ಇದು 9,200 ಕೆ.ಜಿ ತೂಕವಿದೆ. ಈ ವೇಳೆ ಇಸ್ರೋ ನಡೆದು ಬಂದ ಹಾದಿಯನ್ನು ಅವರು ಮೆಲುಕು ಹಾಕಿದ ಅವರು 1963 ರಲ್ಲಿ ಇಸ್ರೋವನ್ನು ಸ್ಥಾಪಿಸಲಾಯಿತು. ಆಗ ಮುಂದುವರಿದ ರಾಷ್ಟ್ರಗಳಿಗಿಂತ ಭಾರತವು 6 ರಿಂದ 7 ವರ್ಷ ಹಿಂದೆ ಇತ್ತು. ಅದೇ ವರ್ಷ ಅಮೆರಿಕವು ಸಣ್ಣದೊಂದು ರಾಕೆಟ್ ಅನ್ನು ಭಾರತಕ್ಕೆ ನೀಡಿತು. ಇದರಿಂದ ನ .21 1963 ರಲ್ಲಿ ಬಾಹ್ಯಾಕಾಶ ಕಾರ್ಯಕ್ರಮವನ್ನು ಆರಂಭಿಸಿದೆವು.

ನಾವು ನಮ್ಮ ಉಡಾವಣಾ ವಾಹನವನ್ನು ಬಳಸಿಕೊಂಡು 34 ದೇಶಗಳಿಂದ 433 ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಪ್ರಸ್ತುತ ಭಾರತವು ಕಕ್ಷೆಯಲ್ಲಿರುವ ಉಪಗ್ರಹಗಳ ಸಂಖ್ಯೆ ಪ್ರಸ್ತುತ 56 ಆದರೆ ಇನ್ನು ಮೂರು ವರ್ಷಗಳಲ್ಲಿ ಇದರ ಮೂರು ಪಟ್ಟು ಹೆಚ್ಚಾಗಲಿದೆ ಎಂದರು.

Previous articleNamma Metro Yellow Line: ಮೊದಲ ದಿನವೇ ರೈಲು ಭರ್ತಿ, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ
Next articleVande Bharat Train: ದಾವಣಗೆರೆಗೆ 2ನೇ ವಂದೇ ಭಾರತ್ ರೈಲು, ವೇಳಾಪಟ್ಟಿ

LEAVE A REPLY

Please enter your comment!
Please enter your name here