ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸಲ್ಲಿಕೆ: ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸ್ಸು

0
72

ಬೆಂಗಳೂರು: ದ್ವಿಭಾಷಾ ನೀತಿ ಅನುಷ್ಠಾನ ಹಾಗೂ ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಮಾತೃ ಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು ಮತ್ತು ಹಂತ ಹಂತವಾಗಿ RTE ವ್ಯಾಪ್ತಿಯನ್ನು 4-18 ವಯಸ್ಸಿನವರಿಗೆ ವಿಸ್ತರಿಸುವುದು, ಸೇರಿದಂತೆ ಹಲವು ಶಿಫಾರಸುಗಳನ್ನು ಒಳಗೊಂಡ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಶಿಕ್ಷಣ ಆಯೋಗವು ಅಂತಿಮ ವರದಿ ಸಲ್ಲಿಸಿದೆ.

ಆನ್ಲೈನ್ ಪಿಟಿಶನ್ನ: ದ್ವಿಭಾಷಾ ನೀತಿ ಜಾರಿಗೆಗೆ ಒತ್ತಾಯಿಸಿ ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ದ್ವಿಭಾಷಾ ನೀತಿಯ ಪರವಾಗಿ ಆನ್ಲೈನ್ ಪಿಟಿಶನ್ನ ನಡೆದಿದತ್ತು, ಇದರ ಯಶಸ್ವಿ ಭಾಗವಾಗಿ 50000 ಕನ್ನಡಿಗರು ಸಹಿ ಹಾಕಿ ಬಾರಿ ಬೆಂಬಲ ನೀಡಿದ್ದರು. ಈ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಲಾಗಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಪ್ರೊ. ಸುಖದೇವ್ ಥೋರಾಟ್ ಅವರ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ಆಯೋಗವು ಅಂತಿಮ ವರದಿ ಸಲ್ಲಿಸಿದ್ದು. ಶಾಲಾ ಶಿಕ್ಷಣದಲ್ಲಿ 2+8+4 ಸೂತ್ರ ಹಾಗೂ ದ್ವಿಭಾಷಾ ನೀತಿ (ಕನ್ನಡ ಮತ್ತು ಇಂಗ್ಲಿಷ್‌) ಸೇರಿ ಹಲವು ಶಿಫಾರಸುಗಳನ್ನು ಮಾಡಿದೆ.

2023ರಲ್ಲಿ ರಚನೆ ಆದ ಆಯೋಗ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಪರ್ಯಾಯವಾಗಿ ರಾಜ್ಯಕ್ಕೆ ಒಂದು ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯ ಶಿಕ್ಷಣ ಆಯೋಗವನ್ನು 2023ರ ಅ.11ರಂದು ರಾಜ್ಯ ಸರ್ಕಾರ ರಚನೆ ಮಾಡಿತ್ತು. ಪ್ರೊ. ಸುಖದೇವ್ ಥೋರಾಟ್ ಅವರ ಅಧ್ಯಕ್ಷತೆಯ 17 ಸದಸ್ಯರು, 6 ವಿಷಯ ತಜ್ಞರು/ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿ ಒಳಗೊಂಡ ರಾಜ್ಯ ಶಿಕ್ಷಣ ಆಯೋಗವು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಸಂಪುಟಗಳ 2,197 ಪುಟಗಳ ಶಿಕ್ಷಣ ನೀತಿಯ ಅಂತಿಮ ವರದಿ ಸಲ್ಲಿಸಿದೆ. ಆಯೋಗದ ಅಂತಿಮ ವರದಿಯನ್ನು ಮೂರು ಸಂಪುಟಗಳಲ್ಲಿ ಕ್ರೋಡೀಕರಿಸಲಾಗಿದೆ.

ಸಂಪುಟ IA ಮತ್ತು 18 ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದೂ ಸುಮಾರು 580 ಪುಟಗಳನ್ನು ಹೊಂದಿದೆ, ಸಂಪುಟ 2A ಮತ್ತು 2B ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದೂ ಸುಮಾರು 455 ಪುಟಗಳನ್ನು ಹೊಂದಿದೆ ಮತ್ತು ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಸಂಪುಟ 3 ಸುಮಾರು 450 ಪುಟಗಳನ್ನು ಹೊಂದಿದೆ. ಈ ವರದಿಯು ಒಟ್ಟು 2197 ಪುಟಗಳನ್ನು ಒಳಗೊಂಡಿದೆ, ಅದರಲ್ಲಿ 617 ಕೋಷ್ಟಕಗಳು, 47 ಚಿತ್ರಗಳು, 16 ಗ್ರಾಫ್‌ಗಳು, 8 ಚಿತ್ರಗಳು ಮತ್ತು 619 ಪುಟಗಳ ಅನುಬಂಧಗಳು ಇವೆ.

ವರದಿಯಲ್ಲಿ ದ್ವಿಭಾಷಾ ನೀತಿ ಅನುಷ್ಠಾನ, ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು, ಶಾಲಾ ಶಿಕ್ಷಣದಲ್ಲಿ ಪೂರ್ವ ಪ್ರಾಥಮಿಕ- 2 ವರ್ಷ ಹಾಗೂ ಪ್ರಾಥಮಿಕ- 8 ವರ್ಷ ಮತ್ತು ಮಾಧ್ಯಮಿಕ ಶಿಕ್ಷಣ- 4 ವರ್ಷ (2+8+4) (ಅಳವಡಿಕೆ, ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವುದು, ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳ ಸ್ಥಾಪಿಸುವುದು ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಲ್ಲಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಶಿಕ್ಷಣ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಹಾಲಿ ಇರುವ ಅನುದಾನ ಪ್ರಮಾಣ ಶೇ.14ರಿಂದ ಶೇ.25-30ಕ್ಕೆ ಮರುಹಂಚಿಕೆ ಮಾಡಬೇಕು. ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಪರಿಗಣಿಸಬೇಕು. ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಶಾಶ್ವತ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಆಯೋಗದ ಪ್ರಮುಖ ಶಿಫಾರಸುಗಳು ಈ ಕೆಳಗಿನಂತಿವೆ:
ಶಾಲಾ ಶಿಕ್ಷಣ:

  • 2+8+4 ರಚನೆ ಅಳವಡಿಕೆ: ಪೂರ್ವ ಪ್ರಾಥಮಿಕ- 2 ವರ್ಷ, ಪ್ರಾಥಮಿಕ- 8 ವರ್ಷ ಮತ್ತು ಮಾಧ್ಯಮಿಕ ಶಿಕ್ಷಣ- 4 ವರ್ಷ.
  • ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳ ಸ್ಥಾಪನೆ.
  • ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು.
  • ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆ ಬೋಧನಾ ಮಾಧ್ಯಮ ಕಡ್ಡಾಯ
  • ದ್ವಿಭಾಷಾ ನೀತಿಯ ಅನುಷ್ಠಾನ: ಕನ್ನಡ/ ಮಾತೃಭಾಷೆ ಮತ್ತು ಇಂಗ್ಲಿಷ್.
  • 2 ವರ್ಷಗಳ ಪೂರ್ವ ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಲ್ಲೇ ಕಲಿಸಬೇಕು.
  • ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸಬೇಕು.
  • ಆರ್‌ಟಿಇ ವ್ಯಾಪ್ತಿಯನ್ನು 4-18 ವಯಸ್ಸಿನವರೆಗೆ ವಿಸ್ತರಿಸಬೇಕು.
  • ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರಿಯ ವಿದ್ಯಾಲಯಗಳಿಗೆ ಸಮನಾಗಿ ಹೆಚ್ಚಿಸಬೇಕು.
  • ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಬೇಕು.
  • ಹೆಚ್ಚಿನ ಖಾಸಗೀಕರಣ ತಡೆಗಟ್ಟಬೇಕು.
  • ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆ ರಚಿಸಬೇಕು.
  • ಸಾಂವಿಧಾನಿಕ ಮೌಲ್ಯ ಶಿಕ್ಷಣ ಕಡ್ಡಾಯ ವಿಷಯ ಮಾಡಬೇಕು.

ಉನ್ನತ ಶಿಕ್ಷಣ

  • ಸಮಯೋಚಿತ ಮತ್ತು ಸಮರ್ಪಕ ನಿಧಿಗಾಗಿ ಸಮಗ್ರ ಹಣಕಾಸು ಚೌಕಟ್ಟು ರಚಿಸಬೇಕು.
  • ಶಿಕ್ಷಣಕ್ಕಾಗಿ ಜಿಎಸ್‌ಡಿಪಿಯ ಶೇ.4ರಷ್ಟು ಮತ್ತು 2034-35ರ ವೇಳೆಗೆ ಉನ್ನತ ಶಿಕ್ಷಣಕ್ಕಾಗಿ ಶೇ.1ರಷ್ಟು ವೆಚ್ಚ ಮಾಡಬೇಕು.
  • ಉನ್ನತ ಶಿಕ್ಷಣಕ್ಕೆ ಹಾಲಿ ಶೇ.14ರಿಂದ ಶೇ.25ರಿಂದ ಶೇ.30ಕ್ಕೆ ಮರುಹಂಚಿಕೆ ಮಾಡಬೇಕು.
  • ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಪರಿಗಣಿಸಬೇಕು.
  • ಎನ್‌ಇಪಿ-2020 ಪೂರ್ವದ ಪುನಃ ಪ್ರವೇಶ ನೀತಿಯನ್ನು ಮುಂದುವರೆಸಬೇಕು.
  • ಕನ್ನಡ/ಮಾತೃಭಾಷೆ ಭಾರತೀಯ/ವಿದೇಶಿ ಭಾಷೆ ಸೇರಿ 2ನೇ ಭಾಷಾ ಕೋರ್ಸ್ ಕಡ್ಡಾಯಗೊಳಿಸಿ.
  • 5 ವರ್ಷಗಳ ಸಮಗ್ರ ಪದವಿ-ಸ್ನಾತಕೋತ್ತರ ಪದವಿ ಕಾರ್ಯಕ್ರಮ ನೀಡಬೇಕು.
  • ಎಂ.ಎಲ್, ಎಐ+ ಎಕ್ಸ್‌, ಆರೋಗ್ಯ, ಕೃಷಿ, ಕಾನೂನಿನಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ಪರಿಚಯಿಸಬೇಕು.

ವೃತ್ತಿಪರ ಶಿಕ್ಷಣ

  • ಶಿಕ್ಷಣದ ಎಲ್ಲ ವಿಭಾಗಗಳಲ್ಲಿ ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್ ಹೆಚ್ಚಿಸಬೇಕು.
  • ವಿವಿಧ ವೃತ್ತಿಪರ ವಿಭಾಗಗಳಲ್ಲಿ, ಗ್ರಾಮೀಣ ಮತ್ತು ಕೃಷಿ ಸಂಬಂಧಿತ ಕೋರ್ಸ್‌ಗಳಲ್ಲಿ ಅಲ್ಪಾವಧಿ ಡಿಪ್ಲೋಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗೆ ಪ್ರೋತ್ಸಾಹ.
  • ಸಾಮಾನ್ಯ ಪದವಿ ಕೋರ್ಸ್‌ಗಳಿಗೆ ಇಂಟರ್ನ್‌ಶಿಪ್ ಸೌಲಭ್ಯ ನೀಡುವಾಗ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕು.
  • ಎಂಜಿನಿಯರಿಂಗ್‌ನಲ್ಲಿ ಉದ್ಯಮಶೀಲತೆ, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು
  • ಸುಸ್ಥಿರ ಮತ್ತು ಹಸಿರು ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು
Previous articleಜ್ಞಾನದೀಪ್ತಿ-2025: ಸಂಯುಕ್ತ ಕರ್ನಾಟಕದ ಶಿಕ್ಷಕರ ಕೌಶಲ್ಯ ವೃದ್ಧಿ ಕಾರ್ಯಾಗಾರ
Next articleCTET ಹೊಸ ನಿಯಮ: ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಬದಲಾವಣೆ

LEAVE A REPLY

Please enter your comment!
Please enter your name here