ಆಗಸ್ಟ್‌ ಅಂತ್ಯಕ್ಕೆ ಮೋದಿ ಚೀನಾ ಪ್ರವಾಸ: ಗಲ್ವಾನ್ ಘರ್ಷಣೆ ಬಳಿಕ ಇದೇ ಮೊದಲ ಭೇಟಿ

0
60

ನವದೆಹಲಿ: ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಲಿದ್ದು, ಎರಡು ದಿನಗಳ ಕಾಲ ಅವರು ಚೀನಾದಲ್ಲಿ ಇರಲಿದ್ದಾರೆ.

ಆಗಸ್ಟ್ 29ಕ್ಕೆ ಪ್ರಧಾನಿ ಮೋದಿ ಪ್ರವಾಸ ಆರಂಭಿಸಲಿದ್ದು, ಮೊದಲು ಜಪಾನ್‌ಗೆ ಭೇಟಿ ನೀಡಲಿದ್ದಾರೆ. ಜಪಾನ್ ಪ್ರಧಾನಿ‌ ಜತೆ ವಾರ್ಷಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ. ಬಳಿಕ ಆ. 31ರಿಂದ ನಡೆಯಲಿರುವ ಶಾಂಫೈ ಸಹಕಾರ ಸಂಸ್ಥೆಯ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‌ನಿಂದ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಎಸ್‌ಸಿಒ ಶೃಂಗಸಭೆ ಚೀನಾದಲ್ಲಿ ಆ. 31ರಿಂದ ಸೆ. 1ರವರೆಗೆ ನಡೆಯಲಿದೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕೊನೆಯ ಬಾರಿಗೆ 2019ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದು, ಗಲ್ವಾನ್ ಘರ್ಷಣೆಯ ಬಳಿಕ ಇದು ಅವರ ಮೊದಲ ಭೇಟಿ ಇದಾಗಿದೆ. ಆದರೆ 2024, ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರೂ ನಾಯಕರು ಕೆಲ ಒಪ್ಪಂದಗಳನ್ನು ಸ್ವಾಗತಿಸಿದ್ದರು.

ಗಾಲ್ವಾನ್‌ದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಗಳು ನಡೆದವು. ಈ ವೇಳೆ 20 ಭಾರತೀಯ ಸಿಬ್ಬಂದಿ ಪ್ರಾಣ ಕಳೆದುಕೊಂಡರು. ಅತ್ತ ಚೀನಾದ ಕಡೆಯಿಂದಲೂ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿತ್ತು. ಇದರಿಂದಾಗಿ ಎರಡೂ ದೇಶಗಳ ಸಂಬಂಧಗಳು ಹದಗೆಟ್ಟವು. ಇದಾದ ಬಳಿಕ ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ ಪರ ಚೀನಾ ನಿಲುವು ವ್ಯಕ್ತವಾದ್ದ ನಂತರ ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು.

ಇನ್ನು ಭಾರತ ಮತ್ತು ಚೀನಾದ ಜತೆಗೆ ಅಮೆರಿಕದ ತೆರಿಗೆ ಸಂಘರ್ಷ ನಡೆದಿದ್ದು, ಈ ಸಂದರ್ಭದಲ್ಲಿ ಪ್ರಧಾನಿಯವರ ಸಮತೋಲಿತ ವಿದೇಶಾಂಗ ನೀತಿ ಕಾರಣದಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಇದಲ್ಲದೇ ಶೃಂಗಸಭೆಯ ವೇಳೆ ರಷ್ಯಾದ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಅನೌಪಚಾರಿಕ ಸಭೆಗಳು ನಡೆಯುವ ಸಾಧ್ಯತೆಯಿದೆ. ಇದರಿಂದಾಗಿ ರಷ್ಯಾ, ಭಾರತ ಮತ್ತು ಚೀನಾ ರಾಷ್ಟ್ರಗಳ ತ್ರಿಪಕ್ಷೀಯ ಸಹಕಾರದ ಕುರಿತಂತೆ ಮಾತುಕತೆ ನಡೆಯುವ ಸಾಧ್ಯತೆ ಇವೆ ಎಂದು ಹೇಳಲಾಗಿದೆ.

Previous articleಬೇಲ್ ರದ್ದು ಮಾಡಬೇಡಿ ಎಂದು ಸುಪ್ರೀಂಗೆ ದರ್ಶನ್ ಮನವಿ, ಕೊಟ್ಟ ಕಾರಣಗಳು
Next articleಸಂಪಾದಕೀಯ: ಶಾಲೆಗೆ ಮನೋವೈದ್ಯ, ಮನೆಗೆ ಅಜ್ಜಿ-ತಾತ ಬೇಕು

LEAVE A REPLY

Please enter your comment!
Please enter your name here