ಪಾಸಿಟಿವ್‌ ಬಂದ ತಕ್ಷಣ ಆತಂಕ ಬೇಡ-ಆರೋಗ್ಯ ಸಚಿವ ಕೆ. ಸುಧಾಕರ್

0
13

ಬೆಳಗಾವಿ: ಚೀನಾದಿಂದ ಬಂದಿದ್ದ ವ್ಯಕ್ತಿಗೆ ಕೋವಿಡ್​ ದೃಢಪಟ್ಟಿದೆ. ಆದ್ರೆ, ಯಾವ ತಳಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕೊರೊನಾ ಪಾಸಿಟಿವ್ ಬಂದ ತಕ್ಷಣ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದರು.
ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸದ್ಯ ನಮ್ಮ ದೇಶದಲ್ಲಿ ಆತಂಕ ಪಡುವಂತ ಸ್ಥಿತಿ ಇಲ್ಲ. ಚೀನಾಗೆ ಹೋಲಿಕೆ ಮಾಡೋದು ಬೇಡ. ಯಾರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ತಗೆದುಕೊಂಡರೆ ಸಾಕು. ನಮ್ಮ ವ್ಯಾಕ್ಸಿನೇಷನ್‌ ಚೆನ್ನಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಅಂತಾ ತಿಳಿಸಿದರು. ನಮ್ಮ ದೇಶದಲ್ಲಿ ಎರಡುಪಟ್ಟು ನಾವು ಚೆನ್ನಾಗಿದ್ದೇವೆ. ಸ್ವಾಭಾವಿಕವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇದೆ. ಇವತ್ತು ಕಂದಾಯ ಸಚಿವರ ಜೊತೆ ಸಭೆ ನಡೆಸಿ ಯಾವ ರೀತಿ ಮಾರ್ಗಸೂಚಿ ಕೊಡಬೇಕು ಮತ್ತು ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಪ್ರತಿಕ್ರಿಯಿಸಿದರು.

Previous articleಇಳಕಲ್‌ನಲ್ಲಿ ಜೆಸಿಬಿಯಿಂದ ಶೆಡ್ಡುಗಳ ತೆರವು
Next articleಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿರೋಧಿಸಿ ಮಠಾಧೀಶರಿಂದ ಧರಣಿ