ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

0
12

ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿ ಜೆಸಿಬಿಗಳು ಬೆಳ್ಳಂಬೆಳಗ್ಗೆ ಘರ್ಜನೆ ನಡೆಸಿದ್ದು, ಸೋಲಾಪುರ ರಸ್ತೆಯ ಉಮದಿ ಸೂಪರ್ ಮಾರ್ಕೆಟ್‌ನಿಂದ ದಿ ಬಂಜಾರ ಕ್ರಾಸ್‌ವರೆಗೂ ಮೊದಲ ಹಂತದ ಮಾಸ್ಟರ್ ಪ್ಲಾನ್ ಕಾರ್ಯಾಚರಣೆ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸುಮಾರು 8 ಜೆಸಿಬಿಗಳು ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಮಾಜಿ ಎಂಎಲ್ಎ ಉಸ್ತಾದ್ ಅವರ ಮನೆ ಕಂಪೌಂಡ್ ಸೇರಿದಂತೆ ಪ್ರತಿಷ್ಠಿತ ಹೋಟೆಲ್‌ಗಳು ನೆಲಸಮವಾಗಿವೆ. ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ಫುಟ್‌ಪಾತ್ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಅತಿಕ್ರಮಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.

Previous articleಮೈದಾನಕ್ಕೆ ನುಗ್ಗಿ ಕ್ರಿಕೆಟ್ ಆಟಗಾರರ ಕೊಲೆ: ಶಿಂದೊಳ್ಳಿಯಲ್ಲಿ ಡಬಲ್ ಮರ್ಡರ್
Next articleಮಾಜಿ ಸಚಿವ ಮಲ್ಲಿಕಾರ್ಜುನ ವಿರುದ್ಧ ಪ್ರತಿಭಟನೆ-ಬಂಧನಕ್ಕೆ ಒತ್ತಾಯ