ಕಾರ್ಗಿಲ್ ವಿಜಯ್ ದಿವಸಕ್ಕೆ 26 ವರ್ಷ

0
104

ಬೆಂಗಳೂರು: ಇಂದು “ಕಾರ್ಗಿಲ್ ವಿಜಯ್ ದಿವಸ್”. ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. 1999ರಲ್ಲಿ ಕಾರ್ಗಿಲ್ ಬೆಟ್ಟವನ್ನು ಆಕ್ರಮಿಸಕೊಂಡ ನುಸುಳುಕೋರರು ಮತ್ತು ಪಾಕ್ ಸೈನಿಕರನ್ನು ಬಗ್ಗು-ಬಡೆದು ತಮ್ಮ ಅಪ್ರತಿಮ ಶೌರ್ಯ, ಪರಾಕ್ರಮಗಳನ್ನು ಪ್ರದರ್ಶಿಸಿ ವಿಜಯವನ್ನು ತಂದು ಕೊಟ್ಟ ದಿನ.

ಭಾರತೀಯರಿಗೆ ಜುಲೈ 26 ಎಂದೂ ಮರೆಯದ ದಿನವಾಗಿದೆ. ಕಾರ್ಗಿಲ್‌ ಯುದ್ಧ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.

1999ರ ಜುಲೈ 26ರಂದು ಭಾರತೀಯ ಸೈನಿಕರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್‌-ಡ್ರಾಸ್‌ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 25 ವರ್ಷ ಫೂರ್ಣಗೊಂಡಿದ್ದು, 26ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ.

ಇಂದು ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿದ್ದಾರೆ ಅದಕ್ಕೆ ನಮ್ಮ ಸೈನಿಕರು ಮಾಡಿದ ಶೌರ್ಯ, ತ್ಯಾಗಗಳೇ ಕಾರಣ. ಗಂಭೀರ ಗಾಯಗಳಾಗಿದ್ದರೂ, ದಿನಗಟ್ಟಲೆ ಏನನ್ನೂ ತಿನ್ನದಿದ್ದರೂ, ಪ್ರತಿಕೂಲ ವಾತಾವರಣದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಬಿಟ್ಟು ದೇಶದ ರಕ್ಷಣೆಗೆ ಪ್ರಾಣತೆತ್ತ ವೀರ ಕಲಿಗಳನ್ನು ಇಂದು ಸ್ಮರಿಸೋಣ.

ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ಕಾರ್ಗಿಲ್ ವಿಜಯ ದಿವಸ್‌ ಆಚರಿಸಲಾಗುತ್ತದೆ. ಇಂದು ದೇಶದೆಲ್ಲೆಡೆ ವೀರಯೋಧರನ್ನು ಸ್ಮರಿಸುವ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಈ ಬಾರಿ ಕಾರ್ಗಿಲ್‌ ವಿಜಯೋತ್ಸವ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ನೆರೆರಾಷ್ಟ್ರ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ನಡೆದ ಆಪರೇಷನ್‌ ಸಿಂಧೂರ್‌ ಯಶಸ್ವಿ ಕಾರ್ಯಾಚರಣೆಯು ಕಾರ್ಗಿಲ್‌ ವಿಜಯೋತ್ಸವದ ಸಂಭ್ರಮಕ್ಕೆ ಒತ್ತು ನೀಡಿದೆ.

26ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಸೈನಿಕರ ಶೌರ್ಯ ಮತ್ತು ತ್ಯಾಗದ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ‘ಇ-ಶ್ರದ್ಧಾಂಜಲಿ’ ಸಲ್ಲಿಸುವ ಪೋರ್ಟಲ್ ಸೇರಿದಂತೆ ಪ್ರಮುಖ ಮೂರು ಯೋಜನೆಗಳನ್ನು ಸೇನೆಯು ಚಾಲನೆ ನೀಡಲಿದ್ದು, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ ಘಟನೆಗಳನ್ನು ಕಥೆಗಳ ರೂಪದಲ್ಲಿ ಜನರು ಕ್ಯೂಆರ್ ಕೋಡ್ ಆಧಾರಿತ ಆಡಿಯೋ ಅಪ್ಲಿಕೇಶನ್ ಮೂಲಕ ಕೇಳಬಹುದಾದ ಒಂದು ಯೋಜನೆಯನ್ನು ಲೋಕಾಪರ್ಣೆ ಮಾಡಲಿದೆ.

ಯುದ್ಧ ಆರಂಭವಾಗಿದ್ದು ಏಕೆ?: ಕಾರ್ಗಿಲ್ ಪ್ರದೇಶದಲ್ಲಿ ಚಳಿಗಾಲದಲ್ಲಿ ತಾಪಮಾನ ಮೈನಸ್ ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ. ಅಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. 1999 ರಲ್ಲಿ ಇದೇ ಸಂದರ್ಭ ಬಳಸಿಕೊಂಡ ಪಾಪಿ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಆದರೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೋತು ಶರಣಾಗಿತ್ತು.

Previous articleಅಂಕಣ ಬರಹ: ಮಾತಿನಮಲ್ಲ ಧನಕರ್ ಆಗಲಿಲ್ಲ ಶುಭಕರ
Next articleಉತ್ತರ ಕರ್ನಾಟಕ-ಬೆಂಗಳೂರು ನಡುವೆ ವಿಶೇಷ ರೈಲು, ವೇಳಾಪಟ್ಟಿ

LEAVE A REPLY

Please enter your comment!
Please enter your name here