ಉಪ ರಾಷ್ಟ್ರಪತಿ ಚುನಾವಣೆ; ಸಂಸತ್‌ನಲ್ಲಿ ಪಕ್ಷಗಳ ಬಲಾಬಲ?

0
109

ನವದೆಹಲಿ: ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ತೆರವಾಗಿರುವ ಹುದ್ದೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ತಯಾರಿ ಆರಂಭಿಸಿದೆ. ಶೀಘ್ರದಲ್ಲೇ ಚುನಾವಣೆ ದಿನಾಂಕ ಘೋಷಣೆಯಾಗಲಿದ್ದು, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಪರವಾದ ಅಭ್ಯರ್ಥಿಗಳು ಯಾರು? ಎಂದು ಲೆಕ್ಕಾಚಾರ ಆರಂಭವಾಗಿದೆ.

ಆಗಸ್ಟ್‌ ಅಂತ್ಯದೊಳಗೆ ನೂತನ ಉಪ ರಾಷ್ಟ್ರಪತಿ ಆಯ್ಕೆಯಾಗಲಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಇರುವುದರಿಂದ ಎನ್‌ಡಿಎ ಮೈತ್ರಿಕೂಟ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಉಪ ರಾಷ್ಟ್ರಪತಿ ಹುದ್ದೆಗೆ ಮಾಜಿ ಸಿಎಂ ವಸುಂಧರಾ ರಾಜೇ, ರಾಮ್‌ ನಾಥ್ ಠಾಕೂರ್, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಬಿಹಾರ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಮುಂತಾದ ನಾಯಕರ ಹೆಸರುಗಳು ಕೇಳಿ ಬರುತ್ತಿವೆ.

ಪಕ್ಷಗಳ ಬಲಾಬಲ: ಉಪ ರಾಷ್ಟ್ರಪತಿ ಚುನಾವಣೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮತದಾನ ಮಾಡಲಿದ್ದಾರೆ. ಚುನಾವಣೆ ಘೋಷಣೆಯಾಗುವ ಮೊದಲೇ ಮೈತ್ರಿಕೂಟದ ಲೆಕ್ಕಾಚಾರಗಳ ಕುರಿತು ಚರ್ಚೆಗಳು ಆರಂಭವಾಗಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಪರವಾಗಿ ಸಂಖ್ಯೆ ಇದ್ದು, ಗೆಲುವು ಸುಲಭವಾಗಿದೆ.

ಎನ್‌ಡಿಎ ಮೈತ್ರಿಕೂಟದ ಬಲ 782, ಬಹುಮತ 392 ಆಗಿದೆ (ಲೋಕಸಭೆ 1, ರಾಜ್ಯಸಭೆ 5 ಸ್ಥಾನ) ಖಾಲಿ ಇದೆ. ಎನ್‌ಡಿಎ ಬಲ 427, ಲೋಕಸಭೆಯಲ್ಲಿ 293, ರಾಜ್ಯಸಭೆ 134.

ಲೋಕಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷ. ಸದಸ್ಯರ ಬಲ 99, ರಾಜ್ಯಸಭೆಯಲ್ಲಿ37. ಇಂಡಿಯಾ ಮೈತ್ರಿಕೂಟ ಒಟ್ಟಾಗಿ ಸೇರಿದರೆ ಒಟ್ಟು ಸಂಖ್ಯಾಬಲ 300 ಆಗಲಿದೆ.

ಒಟ್ಟಾರೆ ಸದಸ್ಯ ಬಲದಲ್ಲಿ ಉಪ ರಾಷ್ಟ್ರಪತಿ ಅಭ್ಯರ್ಥಿ ಗೆಲುವಿಗೆ 394 ಮತಗಳು ಅಗತ್ಯವಿದೆ. ಆದ್ದರಿಂದ ಯಾರೇ ಅಭ್ಯರ್ಥಿಯಾದರೂ ಸಹ ಎನ್‌ಡಿಎ ಮೈತ್ರಿಕೂಟ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ.

ಸಂವಿಧಾನದ ನಿಯಮದ ಪ್ರಕಾರ ಉಪ ರಾಷ್ಟ್ರಪತಿ ನಿಧನರಾದರೆ, ರಾಜೀನಾಮೆ ನೀಡಿದರೆ ಆದಷ್ಟು ಬೇಗ ಚುನಾವಣೆ ನಡೆಸಬೇಕಿದೆ. ಆದ್ದರಿಂದ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಹೊಸ ರಾಷ್ಟ್ರಪತಿ ಅಧಿಕಾರವಹಿಸಿಕೊಳ್ಳುವ ನಿರೀಕ್ಷೆ ಇದೆ.

ಎನ್‌ಡಿಎ ಮೈತ್ರಿಕೂಟವಾಗಲಿ ಅಥವ ಇಂಡಿಯಾ ಮೈತ್ರಿಕೂಟವಾಗಲಿ ಉಪ ರಾಷ್ಟ್ರಪತಿ ಚುನಾವಣೆಗೆ ಯಾರು ಅಭ್ಯರ್ಥ? ಎಂದು ಇನ್ನೂ ಅಂತಿಮವಾಗಿ ಘೋಷಣೆ ಮಾಡಿಲ್ಲ. ಲೋಕಸಭೆ ಚುನಾವಣೆ 2024ರ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿನ ಒಗ್ಗಟ್ಟು ಹಾಗೆಯೇ ಇದೆಯೇ?. ಎಲ್ಲಾ ಪಕ್ಷಗಳು ಕಾಂಗ್ರೆಸ್ ಬೆಂಬಲಿಸಲಿವೆಯೇ? ಎಂಬುದು ಯಕ್ಷಪ್ರಶ್ನೆಯಾಗಿದೆ.

ಉಪ ರಾಷ್ಟ್ರಪತಿ ಚುನಾವಣೆಗೆ ಸಮಗ್ರ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಹೇಳಿದೆ. ಸಂಸತ್‌ನ ಉಭಯ ಸದನಗಳ ಅರ್ಹ ಸದಸ್ಯರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಜನರಿಂದ ನೇರವಾಗಿ ಆಯ್ಕೆಯಾದ ಸಂಸದರು, ರಾಷ್ಟ್ರಪತಿಗಳಿಂದ ನಾಮ ನಿರ್ದೇಶನಗೊಂಡ ಸಂಸತ್ ಉಭಯ ಸದನಗಳ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು.

ಆಯ್ಕೆಯಾಗುವ ವ್ಯಕ್ತಿ ಅಧಿಕಾರವಹಿಸಿಕೊಂಡ ದಿನದಿಂದ 5 ವರ್ಷಗಳ ಕಾಲ ಅಧಿಕಾರ ಹೊಂದಿರುತ್ತಾರೆ. ಕೇಂದ್ರ ಚುನಾವಣಾ ಆಯೋಗ ಚುನಾವಣೆ ಅಧಿಸೂಚನೆ ಹೊರಡಿಸಿದ ದಿನದಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವುದು, ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ ಪ್ರಕ್ರಿಯೆ 30 ದಿನದಲ್ಲಿ ಮುಗಿಯಬೇಕಿದೆ.

Previous articleKSRTC: ಬೆಂಗಳೂರು-ಘಾಟಿ ಸುಬ್ರಮಣ್ಯ ಟೂರ್ ಪ್ಯಾಕೇಜ್, ವಿವರ
Next articleALTT ಸೇರಿದಂತೆ 25 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಕೇಂದ್ರ ಸರ್ಕಾರ

LEAVE A REPLY

Please enter your comment!
Please enter your name here