ನವದೆಹಲಿ: ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಮೊದಲ ಹಂತದ ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಆಗಮಿಸಿವೆ. ಇದು ಭಾರತೀಯ ಸೇನೆಗೆ ಒಂದು ಐತಿಹಾಸಿಕ ಕ್ಷಣವಾಗಿದೆ. ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಭಾರತೀಯ ಸೇನೆಗೆ ಮೂರು ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಿದೆ.
ಈ ಕುರಿತಂತೆ ರಕ್ಷಣಾ ಸಚಿವಾಲಯದ (ಸೇನೆ) IHQ ಹೆಚ್ಚುವರಿ ಸಾರ್ವಜನಿಕ ನಿರ್ದೇಶನಾಲಯವು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಗಾಳಿಯಲ್ಲಿರುವ ಯುದ್ಧ ಟ್ಯಾಂಕ್‌ಗಳು ಎಂದೂ ಕರೆಯಲ್ಪಡುವ ಸುಧಾರಿತ AH-64E ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಅಮೆರಿಕದಿಂದ ಮೊದಲ ಕಂತಿನಲ್ಲಿ ಬಂದು ಸೇರಿರುವ ಮೂರು ಹೆಲಿಕಾಪ್ಟರ್‌ಗಳಾಗಿವೆ.
6 ಅಪಾಚೆ ಸೇನೆಗೆ: ಭಾರತಕ್ಕೆ 6 ಹೆಲಿಕಾಪ್ಟರ್‌ಗಳನ್ನು ಪೂರೈಸುವ ಒಪ್ಪಂದದ ಭಾಗವಾಗಿ ಮೊದಲ ಹಂತದಲ್ಲಿ ಮೂರು AH-64E ಅಪಾಚೆ ಹೆಲಿಕಾಪ್ಟರ್‌ಗಳನ್ನು ರವಾನಿಸಲಾಗಿದೆ. ಈ ಹೆಲಿಕಾಪ್ಟರ್ ವಿಶ್ವದ ಅತ್ಯಂತ ಸುಧಾರಿತ ಮಲ್ಟಿ ರೋಲ್ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಇವುಗಳನ್ನು ಅಮೆರಿಕ ಸೇನೆ ಬಳಸುತ್ತದೆ. ಈ ಹಿಂದೆ 2015ರಲ್ಲಿ 22 ಅಪಾಚೆ ಹೆಲಿಕಾಪ್ಟರ್ ಖರೀದಿಸಲಾಗಿತ್ತು. ಜುಲೈ 2020ರಲ್ಲಿ ಮತ್ತೆ 600 ಮಿಲಿಯನ್ ಡಾಲರ್ ವೆಚ್ಚದ 6 ಹೆಲಿಕಾಪ್ಟರ್‌ಗಳಿಗಾಗಿ ಸಹಿ ಆಗಿತ್ತು.
ಒಂದು ವರ್ಷದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೆ ಆರು ಹೊಸ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 600 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದೇ ವೇಳೆ AH-64Eನ ಆರು ವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. 2015ರ ಸೆಪ್ಟೆಂಬರ್‌ನಲ್ಲಿ ಭಾರತೀಯ ವಾಯುಸೇನೆ (ಐಎಎಫ್), 22 ಅಪಾಚೆ ಹೆಲಿಕಾಪ್ಟರ್‌ಗಾಗಿ ಅಮೆರಿಕ ಸರ್ಕಾರ ಮತ್ತು ಬೋಯಿಂಗ್ ಲಿಮಿಟೆಡ್‌ನೊಂದಿಗೆ ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು.
ಹೆಚ್ಚುವರಿಯಾಗಿ 2017ರಲ್ಲಿ ರಕ್ಷಣಾ ಇಲಾಖೆಯು ಸೇನೆಗಾಗಿ₹4,168 ಕೋಟಿ ವೆಚ್ಚದಲ್ಲಿ ಬೋಯಿಂಗ್‌ನಿಂದ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು. ಇಂಡಿಯನ್ ಏವಿಯೇಷನ್ ಕಾರ್ಪ್ಸ್ನ ಪೈಲಟ್ಗಳು ಈ ಅಪಾಚೆ ಹೆಲಿಕಾಪ್ಟರ್ ಹಾರಾಟದ ತರಬೇತಿಯನ್ನು ಕಳೆದ ವರ್ಷ ಪಡೆದಿದ್ದಾರೆ.
ಅಪಾಚೆ ಹೆಲಿಕಾಪ್ಟರ್‌ಗಳು ದೇಶದ ಪಶ್ಚಿಮದ ಗಡಿಯಲ್ಲಿ ಮಹತ್ವದ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಅಪಾಚೆ ಹೆಲಿಕಾಪ್ಟರ್‌ಗಳು ಅಡ್ವಾನ್ಸ್ ಟಾರ್ಗೆಟ್ ಸಿಸ್ಟಮ್ ಹೊಂದಿವೆ. ಹೆಚ್ಚಿನ ಶಕ್ತಿ, ಸಾಮರ್ಥ್ಯವನ್ನು ಹೊಂದಿವೆ.
ಈಗ ಭಾರತದ ಸೇನೆಗೆ ಅಪಾಚೆ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಅಪಾಚೆ ಹೆಲಿಕಾಪ್ಟರ್ ಅಲ್ಲಿ 30 ಎಂಎಂ ಎಂ230 ಚೈನ್ಗನ್ ಇದೆ. 70 ಎಂಎಂ ಹೈಡ್ರಾ ರಾಕೆಟ್ ವ್ಯವಸ್ಥೆ ಇದೆ. ಎಜಿಎಂ-114 ಹಿಲ್ ಫೈರ್ ಮಿಸೈಲ್ಗಳು ಭೂಮಿಯ ಮೇಲಿರುವ ಶಸ್ತ್ರಾಸ್ತ್ರ ವಾಹನ, ಯುದ್ಧ ಟ್ಯಾಂಕ್ಗಳನ್ನು 6 ಕಿ.ಮೀ. ದೂರದಿಂದಲೇ ನಾಶಪಡಿಸುವ ಸಾಮರ್ಥ್ಯವನ್ನು ಪಡೆದಿವೆ.