CBSE ಶಾಲೆಗಳಲ್ಲಿ ಹೊಸ ನಿಯಮ: ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ

0
156

ನವದೆಹಲಿ: ಸಿಬಿಎಸ್‌ಇ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ-CBSE ತನ್ನೆಲ್ಲಾ ಮಾನ್ಯತೆ ಪಡೆದ ಶಾಲೆಗಳಲ್ಲಿ, ಅಧಿಕ ರೆಸಲ್ಯೂಷನ್ ಇರುವ ಧ್ವನಿ ಮತ್ತು ಚಿತ್ರ ಸೆರೆ ಹಿಡಿಯುವಂತಹ ಸಿಸಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

ಹೊಸ ನಿಯಮದಂತೆ, ಶಾಲೆಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ, ಕಾರಿಡಾರ್‌ಗಳಲ್ಲಿ, ಮೆಟ್ಟಿಲುಗಳ ಮೇಲೆ, ತರಗತಿಗಳಲ್ಲಿ, ಪ್ರಯೋಗಾಲಯಗಳಲ್ಲಿ, ಕ್ಯಾಂಟಿನ್ ಮತ್ತು ಆಟದ ಮೈದಾನ ಹಾಗೂ ಸಾಮಾನ್ಯ ಬಳಕೆ ಪ್ರದೇಶದಲ್ಲಿ, ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.

ಬಹುತೇಕ ಪ್ರಕರಣಗಳಲ್ಲಿ ಬೆದರಿಕೆಯು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚಿಸುತ್ತಿದೆ. ನಿಂದನೆ, ಘರ್ಷಣೆ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳ, ಪ್ರಕೃತಿ ಅಥವಾ ಮಾನವ ನಿರ್ಮಿತ ದುರಂತ, ಬೆಂಕಿ ಅವಘಡ, ಸಾರಿಗೆ ಸಮಸ್ಯೆ, ವಿಶೇಷವಾಗಿ ಭಾವನಾತ್ಮಕ ಸುರಕ್ಷತೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಾಲಾ ಮಾನ್ಯತೆಗೆ ಸಂಬಂಧಿಸಿದಂತೆ ರೂಪಿಸಲಾಗಿದ್ದು ಕೆಲ ನಿಯಮಗಳನ್ನು ಜಾರಿಗೆ ತಂದಿದೆ.

ಉನ್ನತ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಧ್ವನಿ ಸಮೇತ ದೃಶ್ಯ ಸಂಗ್ರಹದ ಉಪಕರಣ, ಶಾಲೆಗಳ ಪ್ರವೇಶ ಹಾಗೂ ನಿರ್ಗಮನ ಪ್ರದೇಶಗಳಲ್ಲಿ ಕ್ಯಾಮರಾ ಅಳವಡಿಕೆ, ಆವರಣ, ಮೆಟ್ಟಿಲುಗಳು, ಶಾಲಾ ಕೊಠಡಿಗಳಲ್ಲಿ ಕಡ್ಡಾಯ, ಪ್ರಯೋಗಾಲಯ, ಕ್ಯಾಂಟೀನ್ ಹಾಗೂ ದಾಸ್ತಾನು ಕೊಠಡಿಯಲ್ಲೂ ಕ್ಯಾಮರಾ ಅಳವಡಿಕೆ ಇರಬೇಕು ಎಂದು ಸೂಚಿಸಿದೆ.

ಆಟದ ಮೈದಾನ ಸೇರಿ ಇತರೆ ಪ್ರದೇಶಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಬೇಕು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶೌಚಾಲಯಗಳನ್ನು ಹೊರತುಪಡಿಸಿ ಇತರ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಅಳವಡಿಸುವ ಸಂಬಂಧ ನಿಯಮಗಳಿಗೆ ಬದಲಾವಣೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ರಿಯಲ್ ಟೈಮ್ ರೆಕಾರ್ಡಿಂಗ್ ಇರುವ ಕ್ಯಾಮೆರಾಗಳ ಬ್ಯಾಕ್ ಅಪ್ ಅನ್ನು, ಕನಿಷ್ಠ 15 ದಿನಗಳ ಕಾಲ ಸಂಗ್ರಹ ಮಾಡಿಡಬೇಕು ಎಂದು ಸೂಚಿಸಲಾಗಿದೆ.

“ವಿದ್ಯಾರ್ಥಿಗಳ ಸುರಕ್ಷತೆಯು ಶಾಲೆಗಳ ಪ್ರಮುಖ ಹೊಣೆಗಾರಿಕೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆ ಹಾಗೂ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸುವ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆದೇಶಿಸಲಾಗಿದೆ” ಎಂದು ಸಿಬಿಎಸ್‌ಇ ಕಾರ್ಯದರ್ಶಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ.

ಮಕ್ಕಳು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಆರೋಗ್ಯಕರ ಮತ್ತು ಬೆಂಬಲಿತ ವಾತಾವರಣದ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಮಂಡಳಿಯು ಈ ತಿದ್ದುಪಡಿಯನ್ನು ಮಾಡಲು ನಿರ್ಧರಿಸಿದೆ” ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ನಗರದ ಖಾಸಗಿ ಶಾಲೆಗಳು ಈ ಕ್ರಮವನ್ನು ಮೆಚ್ಚಿಕೊಂಡಿದ್ದು, ಇದು ಶಾಲಾ ಆವರಣದೊಳಗೆ ಭದ್ರತಾ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಿದರೆ, ಸರ್ಕಾರಿ ಶಾಲೆಗಳು ಹೊಸ ಕ್ಯಾಮೆರಾಗಳನ್ನು ಅಳವಡಿಸುವ ಮೊದಲು ಕೆಲವು ಶಾಲೆಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಕ್ಯಾಮೆರಾಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ದೂರುತ್ತಿವೆ.

2018ರ ಉಪ ನಿಯಮಗಳಲ್ಲಿ ಕ್ಯಾಮೆರಾ ಅಳವಡಿಕೆಯನ್ನು ಸೇರ್ಪಡೆ ಮಾಡಿದ್ದು, “ಶಾಲೆಗಳಲ್ಲಿನ ಸಿಸಿಟಿವಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ನಿರ್ವಹಿಸಬೇಕು” ಎಂದು NCPCR ನ ಕೈಪಿಡಿ ಹೇಳುತ್ತದೆ, ಈ ಕುರಿತಂತೆ ಸೋಮವಾರ CBSE ಆದೇಶ ಹೊರಡಿಸಿದೆ.

Previous articleGovernment Employee: ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ
Next articleBMTC: ಹೊಸ ಮಾರ್ಗದಲ್ಲಿ ಸಂಚಾರ ಆರಂಭಿಸಿದ ಬಿಎಂಟಿಸಿ ಬಸ್‌ಗಳು, ವಿವರ

LEAVE A REPLY

Please enter your comment!
Please enter your name here