ಮಾಸ್ಕ್ ಧರಿಸಿ ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ

0
12
ಸಿದ್ದರಾಮಯ್ಯ

ಹುಬ್ಬಳ್ಳಿ : ಕೊರೊನಾ ಬಿಎಫ್ – 7 ರೂಪಾಂತರಿ ತಳಿ ಪ್ರಕರಣ ತಡೆಯುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳಲು ವಿಧಾನಸಭೆಯಲ್ಲಿ ಗುರುವಾರ ಸರ್ಕಾರಕ್ಕೆ ಸಲಹೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟನೆ ವೇಳೆ ಸ್ವಯಂ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರು
ಕಿಕ್ಕಿರಿದು ಸೇರಿದ್ದ ಜನಸ್ತೋಮದಲ್ಲಿ ಸಿದ್ದರಾಮಯ್ಯ ಅಕ್ಕ ಪಕ್ಕ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದರು. ಅಲ್ಲದೇ ಮಾಸ್ಕ ಧರಿಸಿಕೊಂಡೇ ಡೊಳ್ಳು ಬಾರಿಸುವ ಮೂಲಕ, ದೀಪ ಹಚ್ಚುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದುದ್ದಕ್ಕೂ ಮಾಸ್ಕ್ ಧರಿಸಿಕೊಂಡಿದ್ದು, ಸಾರ್ವಜನಿಕರಿಗೆ ಕೋವಿಡ್ ಹಾವಳಿ ಮುನ್ನೆಚ್ಚರಿಕೆ ವಹಿಸಿ ಎಂಬ ಸಂದೇಶ ನೀಡಿದಂತಿತ್ತು.

Previous articleರೈತರಿಗೆ ಅರ್ಥಿಕ ಶಕ್ತಿ ಬರದೇ ಈ ದೇಶ ಉದ್ಧಾರ ಆಗಲ್ಲ: ಸಿದ್ದರಾಮಯ್ಯ
Next articleದರ್ಗಾ ತೆರವು ಅನಿವಾರ್ಯ: ವೈಯಕ್ತಿಕವಾಗಿ ಬೇಸರವಿದೆ