ರಸ್ತೆ ಅಪಘಾತ: ಪಾದಚಾರಿ ಸಾವು

ಬಾಗಲಕೋಟೆ(ಕುಳಗೇರಿ ಕ್ರಾಸ್): ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ.
ಗ್ರಾಮದ ಕೆಇಬಿ ಹತ್ತಿರ ಅಪಘಾತ ಸಂಭವಿಸಿದ್ದು ಕುಷ್ಟಗಿ ತಾಲೂಕಿನ ನಿಲುಗಲ್ ಗ್ರಾಮದ ಸುರೇಶ ಯಮನಪ್ಪ ಈಳಗೇರ(44) ಮೃತಪಟ್ಟವರೆಂದು ಗುರುತಿಸಲಾಗಿದೆ.
ನಿಲುಗಲ್ ಗ್ರಾಮದಿಂದ ತಮ್ಮ ಸಹೋದರಿಯ ಮಮಟಗೇರಿ ಗ್ರಾಮಕ್ಕೆ ಹೋಗಲು ಬಸ್ ಇರದ ಕಾರಣ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.