IAS: ಐಎಎಸ್ ಅಧಿಕಾರಿಗಳ ವರ್ಗಾವಣೆ, ಹಲವು ಜಿಲ್ಲಾಧಿಕಾರಿಗಳು ಬದಲು

ಬೆಂಗಳೂರು: ಕರ್ನಾಟಕ ಸರ್ಕಾರ ಮಂಗಳವಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಹಲವು ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ವಿಜಯಪುರ, ಯಾದಗಿರಿ ಜಿಲ್ಲಾಧಿಕಾರಿಗಳನ್ನು ತತ್‌ಕ್ಷಣದಿಂದ ವರ್ಗಾವಣೆಗೊಳಿಸಿ ಆದೇಶವನ್ನು ಹೊರಡಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಹಾಂತೇಶ್ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್, ಐಎಎಸ್ (ಕೆಎನ್‌:2015) ಅವರನ್ನು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ ಮಾಡಲಾಗಿದೆ. ಸಿಇಒ ಸೆಂಟರ್ ಫಾರ್ ಇ-ಆಡಳಿತ, ಇ-ಆಡಳಿತ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಕ ಮಾಡಲಾಗಿದೆ.

ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಐಎಎಸ್ (ಕೆಎನ್‌:2015) ಅವರನ್ನು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ), ಕಲಬುರಗಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಡಾ. ಆನಂದ್ ಕೆ. ಐಎಎಸ್‌ (ಕೆಎನ್‌:2016) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಿಇಒ ಅವರನ್ನು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ ಮಾಡಲಾಗಿದೆ. ಅವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಹರ್ಷಲ್ ಬೋಯರ್ ನಾರಾಯಣರಾವ್, ಐಎಎಸ್‌ (ಕೆಎನ್‌:2016) ಅಟಲ್ ಜನಸ್ನೇಹಿ ಕೇಂದ್ರ, ಬೆಂಗಳೂರು ಅವರನ್ನು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ ಮಾಡಲಾಗಿದೆ. ಯಾದಗಿರಿ ಜಿಲ್ಲಾಧಿಕಾರಿಯಾಗಿ ಅವರನ್ನು ನೇಮಕ ಮಾಡಲಾಗಿದೆ.

ಪಾಂಡ್ವೆ ರಾಹುಲ್ ತುಕಾರಾಮ, ಐಎಎಸ್ (ಕೆಎನ್‌: 2016) ಜಿಲ್ಲಾ ಪಂಚಾಯತಿ ಸಿಇಒ, ರಾಯಚೂರು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ಹೆಚ್ಚುವರಿ ನಿರ್ದೇಶಕರು ಸಾರ್ವಜನಿಕ ಸೂಚನೆ, ಕಲಬುರಗಿ ಹುದ್ದೆಗೆ ವರ್ಗಾಣೆ ಮಾಡಲಾಗಿದೆ.

ಈಶ್ವರ ಕುಮಾರ್ ಕಂಡು, ಐಎಎಸ್ (ಕೆಎನ್‌:2018) ಸಿಇಒ ಜಿಲ್ಲಾ ಪಂಚಾಯಿತಿ, ಉತ್ತರ ಕನ್ನಡ, ಕಾರವಾರ ಅವರನ್ನು ತತ್‌ಕ್ಷಣದಿಂದ ವರ್ಗಾವಣೆ ಮಾಡಲಾಗಿದೆ. ಅವರನ್ನು ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಓ ಆಗಿ ವರ್ಗಾಯಿಸಲಾಗಿದೆ.