ಅವರು ಅಧಿಕಾರಕ್ಕೆ ಬರುವುದು ಅತಿ ದೂರದ ಮಾತು

ಬೆಂಗಳೂರು: ಕಾಂಗ್ರೆಸ್ ಪಕ್ಷ ಇತಿಹಾಸ ಮರೆತಿದೆ. ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ ಖರ್ಗೆ‌ ಆರ್ ಎಸ್ ಎಸ್ ನಿಷೇಧದ ಕನಸು ಕಾಣುತಿದ್ದರೆ, ಅವರು ಅಧಿಕಾರಕ್ಕೆ ಬಂದರೆ ಅನ್ನುವದು ಅವರು ಆಡುವ ಹತಾಶೆಯ ಮಾತುಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಖರ್ಗೆಯವರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿದೆ. ದುರಂತ ಅಂದ್ರೆ, ಅಧಿಕಾರಕ್ಕೆ ಅವರು ಬರುವುದು ಅತಿ ದೂರದ ಮಾತು. ಕಾಂಗ್ರೆಸ್ ಪಕ್ಷ ದುರಾಡಳಿತ, ಭ್ರಷ್ಟತನವನ್ನು ಮರೆಮಾಚಲು, ದೇಶದ ಸಾಧನೆಯನ್ನು ‌ದೂಶಿಸುವ ಕುಕೃತ್ಯದ ಮೂಲಕ ತಮ್ಮ ತಪ್ಪುಗಳನ್ನು ಮರೆಮಾಚುವ ಘೋರ ತಪ್ಪನ್ನು ಮಾಡುತ್ತಿದೆ. ಭಾರತದ ‌ಸಾಧನೆಯನ್ನೇ ತನ್ನ ತುಷ್ಠಿಕರಣ ರಾಜಕಾರಣಕ್ಕೆ ನೀಚವಾಗಿ ಬಳಸಿಕೊಳ್ಳುವ ಕೆಟ್ಟ ‌ಆಡಳಿತ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು‌ ದೇಶಕ್ಕೆ‌ ಅಪಮಾನ ಎಂದಿದ್ದಾರೆ.