ಕುಂಜಾಲು ಬಸ್ ನಿಲ್ದಾಣ ಬಳಿ ದನದ ರುಂಡ ಪತ್ತೆ

0
139

ಉಡುಪಿ: ಬ್ರಹ್ಮಾವರ ತಾಲೂಕಿನ ಕುಂಜಾಲು ಬಸ್ ನಿಲ್ದಾಣ ಬಳಿ ದುಷ್ಕರ್ಮಿಗಳು ದನದ ರುಂಡ ಎಸೆದಿರುವುದು ಭಾನುವಾರ ಬೆಳಕಿಗೆ ಬಂದಿದೆ.
ಶನಿವಾರ ತಡ ರಾತ್ರಿ ಈ ಘಟನೆ ಸಂಭವಿಸಿದ್ದು , ದನದ ತಲೆಯನ್ನು ದುಷ್ಕರ್ಮಿಗಳು ರಸ್ತೆಯಲ್ಲೇ ಎಸೆದು ಹೋಗಿದ್ದಾರೆ.
ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಪರಾಧಿಗಳ ಪತ್ತೆಗೆ ಹಿಂದೂ ಸಂಘಟನೆಗಳು ಪಟ್ಟುಹಿಡಿದಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಬ್ರಹ್ಮಾವರ ಪೊಲೀಸರು, ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Previous articleಕುಂಜಾಲು ಬಸ್ ನಿಲ್ದಾಣ ಬಳಿ ದನದ ರುಂಡ ಪತ್ತೆ
Next articleದನದ ರುಂಡ ಎಸೆದ ಪ್ರಕರಣ: ಶೀಘ್ರ ಅಪರಾಧಿಗಳ ಪತ್ತೆಗೆ ಆಗ್ರಹ