ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ

ನವದೆಹಲಿ: ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ `ಧರ್ಮ ಚಕ್ರವರ್ತಿ’ ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.
ಆಚಾರ್ಯ ವಿದ್ಯಾನಂದ ಜಿ ಮಹಾರಾಜ್ ಅವರ 100 ನೇ ಜನ್ಮ ದಿನಾಚರಣೆಯಂದು ಶ್ರವಣಬೆಳಗೊಳದ ಆಗಮಕೀರ್ತಿ ಭಟ್ಟಾರಕ ಮುನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಧರ್ಮ ಚಕ್ರವರ್ತಿ ‘ ಬಿರುದು ಪ್ರದಾನ ಮಾಡಿದ್ದಾರೆ. ಸಂತರಿಂದ ನಾವು ಏನೇ ಸ್ವೀಕರಿಸಿದರೂ ಅದನ್ನು ‘ಪ್ರಸಾದ’ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ, ನಾನು ಈ ‘ಪ್ರಸಾದ’ವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಅದನ್ನು ಭಾರತ ಮಾತೆಗೆ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ
ಹೇಳಿದರು.
ಶತಮಾನೋತ್ಸವ ಆಚರಣೆಯು ಆಧ್ಯಾತ್ಮಿಕ ನಾಯಕನಿಗೆ ವರ್ಷಪೂರ್ತಿ ರಾಷ್ಟ್ರೀಯ ಗೌರವ ಸಲ್ಲಿಸುವ ಔಪಚಾರಿಕ ಆರಂಭವನ್ನು ಸೂಚಿಸುತ್ತದೆ, ಇದನ್ನು ಕೇಂದ್ರ ಸಂಸ್ಕೃತಿ ಸಚಿವಾಲಯವು ದೆಹಲಿಯ ಭಗವಾನ್ ಮಹಾವೀರ್ ಅಹಿಂಸಾ ಭಾರತಿ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸುತ್ತಿದೆ.