ಬೆಳಗಾವಿ: ಮಹಿಳೆಯನ್ನ ಮಠದಲ್ಲಿ ಇರಿಸಿಕೊಂಡಿದ್ದಕ್ಕೆ ಮಠದಲ್ಲಿ ದಾಂಧಲೆ ವಿಚಾರಕ್ಕೆ ಸಂಬಂಧಪಟ್ಟಂತೆ ಗೋಕಾಕದ ಶೂನ್ಯ ಸಂಪಾದನ ಮಠದಲ್ಲಿ
ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆಯಿತು. ಶೂನ್ಯ ಸಂಪಾದನ ಮಠದಲ್ಲಿ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ
ಪೂಜ್ಯರ ಮೇಲೆ ಒಂದು ಆರೋಪ ಬಂದಿತ್ತು, ಸೋಷಿಯಲ್ ಮೀಡಿಯಾ ಎಲೆಕ್ಟ್ರಾನಿಕ್ ಮೀಡಿಯಾ ಪ್ರಿಂಟ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು ಕಳೆದ ಎರಡು ದಿನಗಳ ಹಿಂದೆ ನಾನು ಪೊಲೀಸರಿಗೆ ಘಟನೆಯ ಕುರಿತು ಪರಿಶೀಲನೆ ನಡೆಸಲು ತಿಳಿಸಿದ್ದೆ.
ಹಾಗೆಯೇ ಗುಪ್ತಚರ ಇಲಾಖೆಗೂ ಘಟನೆಯ ಮಾಹಿತಿ ಪಡೆಯಲು ತಿಳಿಸಿದ್ದೆ. ಪೊಲೀಸರು ಮತ್ತು ಗುಪ್ತಚರ ಇಲಾಖೆಯವರು ನಮಗೆ ವರದಿ ಸಲ್ಲಿಸಿದ್ದಾರೆ ಆ ವರದಿಯನ್ನು ಇಟ್ಟುಕೊಂಡು ಇಂದು ಸಭೆ ಮಾಡಿದ್ದೆನೆ ವರದಿಯ ಪ್ರಕಾರ ಪೂಜ್ಯರ ಮೇಲಿನ ಆರೋಪ ಸಂಪೂರ್ಣ ಸುಳ್ಳು ಎಂದು ಸಾಭೀತಾಗಿದೆ, ನಡೆದ ಘಟನೆಯಿಂದ ಪೂಜ್ಯರಿಗೂ ಹಾಗೂ ಮಠಾಧೀಶರಿಗೂ ನೋವಾಗಿತ್ತು. ಸಧ್ಯ ಪ್ರಕರಣ ಇತ್ಯರ್ಥಗೊಂಡಿದೆ ಅಂದು ಕುಡಿದು ಯಾರಾದರೂ ಗಲಾಟೆ ಮಾಡಿದ್ದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೂ ಸೂಚನೆ ಕೊಟ್ಟಿದ್ದೆನೆ. ಸಧ್ಯ ಪ್ರಕರಣ ಇತ್ಯರ್ಥಗೊಂಡಿದೆ ಎಲ್ಲವೂ ಬಗೆಹರಿದಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.