ರೌಡಿಶೀಟರ್ ಕೊಲೆ: ಐವರು ಆರೋಪಿಗಳ ಬಂಧನ

0
23

ಶಿವಮೊಗ್ಗ: ಕಳೆದ ಜೂ. 21ರ ಶನಿವಾರ ತಡರಾತ್ರಿ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಳಿ ಇರುವ ಕೆರೆ ಬಳಿ ಅವಿನಾಶ್ ಎಂಬ ರೌಡಿಶೀಟರ್‌ನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಕಟ್ಟೆ ನಿವಾಸಿಗಳಾದ ಪ್ರವೀಣ್ (35), ಆನಂದ (35), ಸುನಿಲ್ (30), ಜಿತೇಂದ್ರ (28) ಹಾಗೂ ಕಿರಣ್ (34) ಬಂಧಿತರು. ಇವರೆಲ್ಲರೂ ಕೃಷಿ ಕೆಲಸ ಮಾಡಿಕೊಂಡಿದ್ದು, ಅವಿನಾಶ್‌ನ ಸಂಬಂಧಿಕರು ಹಾಗೂ ಪರಿಚಯಸ್ಥರು ಎಂದು ತಿಳಿದು ಬಂದಿದೆ. ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗಿದೆ.

Previous articleಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ‍್ಯ ಇದೆ
Next articleಜೆಡಿಎಸ್ ಕಾರ್ಯಕ್ರಮದಲ್ಲಿ ಕಳ್ಳನ ಕೈ ಚಳಕ, ಕಾರ್ಯಕರ್ತರಿಂದ ಗೂಸಾ