ವಿದ್ಯುತ್ ಸ್ಪರ್ಶದಿಂದ ಆನೆ ಸಾವು

ದಾಂಡೇಲಿ: ವನ್ಯಜೀವಿ ವಿಭಾಗದ ಅಂಬಿಕಾನಗರ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಅಂಬಿಕಾನಗರದಿಂದ 2 ಕಿಲೊಮೀಟರ ದೂರದಲ್ಲಿರುವ 220 ಕೆ.ವಿ. ಲೈನ್ ನ ಪಕ್ಕದಲ್ಲಿರುವ ಮರಕ್ಕೆ ಹೆಣ್ಣಾನೆ ಮೈ ಉಜ್ಜುವಾಗ ಬಾಗಿದ ಮರದ ಟೊಂಗೆಯೊಂದು 220 ಕೆ.ವಿ. ಲೈನ್ ಗೆ ತಾಗಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಹೆಣ್ಣಾನೆ ಸ್ಥಳದಲ್ಲೆ ಮೃತಪಟ್ಟಿದೆ ಎನ್ನಲಾಗಿದೆ.