ಡಾ. ಪ್ರವೀಣಭಾಯಿ ತೊಗಾಡಿಯಾ 16ರಂದು ಹುಬ್ಬಳ್ಳಿಗೆ

0
33

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಹಿಂದೂ ಪರಿಷತ್, ರಾಷ್ಟ್ರೀಯ ಬಜರಂಗ ದಳ ಹುಬ್ಬಳ್ಳಿ-ಧಾರವಾಡ ಮಹಾನಗರ ವತಿಯಿಂದ ಸ್ವಾಸ್ಥ್ಯ ಹಿಂದೂ, ಸುರಕ್ಷಿತ ಹಿಂದೂ, ಸಮೃದ್ಧ ಹಿಂದೂ ಎಂಬ ಸಂಕಲ್ಪದೊಂದಿಗೆ ಹಿಂದೂ ಚಿಂತನಾ ಸಭೆಯನ್ನು ಜೂನ್ ೧೬ ರಂದು ಹಮ್ಮಿಕೊಳ್ಳಲಾಗಿದೆ.
ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಕೆಎಸ್‌ಆರ್‌ಟಿಸಿ ಸಾಮ್ರಾಟ್ ಹಾಲ್ (ನಾನಕಿ ಕನ್ವೆನ್ಷನ್ ಹಾಲ್) ನಲ್ಲಿ ಅಂದು ಬೆಳಗ್ಗೆ ೧೧ ಗಂಟೆಗೆ ಸಭೆ ನಡೆಯಲಿದೆ. ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ, ಎಂ.ಎಸ್. ಸರ್ಜಿಕಲ್ ಆಂಕಾಲಾಜಿ(ಕ್ಯಾನ್ಸರ್ ಸರ್ಜನ್) ಡಾ.ಪ್ರವೀಣಭಾಯಿ ತೊಗಾಡಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ದಶಕದ ನಂತರ ಅವರು ಹುಬ್ಬಳ್ಳಿಗೆ ಬರುತ್ತಿದ್ದಾರೆ.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ರಮೇಶ ಕುಲಕರ್ಣಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Previous articleಕೆಆರ್‌ಎಸ್ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದವರ ಬಂಧನ
Next articleನೀಟ್ ಫಲಿತಾಂಶದಲ್ಲಿ ವಿಜಯಪುರದ ವೈದ್ಯ ದಂಪತಿ ಪುತ್ರನ ಸಾಧನೆ