ದಲಿತ ಯುವತಿಗೆ ಹಲ್ಲೆ: ಆರೋಪಿ ಬಂಧನ

ಸಂ.ಕ. ಸಮಾಚಾರ, ಉಡುಪಿ: ಚಿಲ್ಲರೆ ವಿಷಯಕ್ಕೆ ಮಾವಿನಕಟ್ಟೆ ಮೆಡಿಕಲ್ ಶಾಪ್’ನ ಯುವತಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಯಾಸ್ಮಿನ್ ಎಂಬಾಕೆಯನ್ನು ಕುಂದಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜೂ. 9ರಂದು ಔಷಧಿ ಖರೀದಿಸಿದ ಯಾಸ್ಮಿನ್, 500 ರೂ. ಚಿಲ್ಲರೆ ವಿಚಾರದಲ್ಲಿ ಮೆಡಿಕಲ್‌ನ ಉದ್ಯೋಗಿ, ದಲಿತ ಯುವತಿ ಜೊತೆ ಗಲಾಟೆ ಮಾಡಿ ಯುವತಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ಮಾಡಿರುವುದಾಗಿ ದೂರಲಾಗಿದೆ. ಈ ಕುರಿತ ಸಿಸಿ ಟಿವಿ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್‌ಪಿ. ಹರಿರಾಂ ಶಂಕರ್ ತಿಳಿಸಿದ್ದಾರೆ.