ಜೈಲಿನಿಂದ‌ ಹೊರಗೆ ಬಂದಿದ್ದ ಯುವಕ ಭೀಕರ ಕೊಲೆ

0
21

ಸಂ.ಕ.‌ಸಮಾಚಾರ ಕಲಬುರಗಿ: ಮಾರಕಾಸ್ತ್ರಗಳಿಂದ ಯುವಕನೊಬ್ಬನನ್ನು ಕೊಚ್ಚಿ ಕೊಲೆಗೈದಿರುವ ದಾರುಣ ಘಟನೆ ನಗರ ಹೊರವಲಯದ ಫಿರೋಜಾಬಾದ ಗ್ರಾಮದ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ನಗರದ ಕಲಬುರಗಿ ‌ಕಿಂಗ್‌ ಪ್ಯಾಲೇಸ್ ಸಮೀಪದ ನಿವಾಸಿ ನಿಜಾಮೋದ್ದಿನ್ ಬಾವಾಚಿ‌ ಅಲಿಯಾಸ್ ನಜ್ಜು(45) ಮೃತಪಟ್ಟ ದುರ್ದೈವಿ. ಕೊಲೆ ಪ್ರಕರಣದ ಲ್ಲಿ ಜೈಲಿಗೆ ಹೋಗಿ ಇತ್ತೀಚಿಗೆ ಬಿಡುಗಡೆ ಗೊಂಡು ಹೊರಬಂದಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಫರಹತಾಬಾದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous articleಬೆಂಗಳೂರು ನಗರ‌ ನೂತನ ಪೊಲೀಸ್‌ ಆಯುಕ್ತರಾಗಿ ಸೀಮಂತ್‌ ಕುಮಾರ್‌ ಸಿಂಗ್‌
Next articleRBI ರೆಪೋ ದರ ಸತತ ಮೂರನೇ ಬಾರಿ ಇಳಿಕೆ