ಘಟನಾ ಸ್ಥಳಕ್ಕೆ ಜಮಾಯಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ
ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಟೆಕಲ್ಲಿನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜನ್ನು ಬಾಂಬು ಇಟ್ಟು ಸ್ಪೋಟಿಸುವುದಾಗಿ ಅನಾಮಧೇಯ ಫೋನ್ ಕರೆ ಇಂದು ಮುಂಜಾನೆ ವೇಳೆ ಬಂದಿದ್ದು,ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ .ಈ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ,ಬಾಂಬು ನಿಷ್ಕ್ರಿಯ ದಳ ಮತ್ತು ಶ್ವಾನ ದಳವು ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಕ್ಯಾಂಪಸನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಇದೊಂದು ಹುಸಿ ಬಾಂಬು ಕರೆ ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಆಸ್ಪತ್ರೆಯ ಹೆರಿಗೆ ವಿಭಾಗದ ಸ್ಥಿರ ದೂರವಾಣಿಗೆ ಕರೆಯೊಂದು ಬಂದಿದೆ.ಪಿಜಿ ವಿದ್ಯಾರ್ಥಿನಿಯೋರ್ವಳು ಕರೆಯನ್ನು ಸ್ವೀಕರಿಸಿದ್ದು ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿಯೋರ್ವನು ಇಂದು ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬು ಸ್ಪೋಟಿಸುವುದಾಗಿ ಹೇಳಿ ಎಲ್ಲರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಈ ರೀತಿ ನಾಲ್ಕೈದು ಬಾರಿ ಕರೆ ಬಂದಿದೆ.
ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೊಬೈಲ್ ನಂಬರ್ ಪರಿಶೀಲಿಸಿ ಆರೋಪಿಗಳನ್ನು ಶ್ರೀಘ್ರದಲ್ಲಿ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.