ಮೊದಲು ಕನ್ನಡಿಗರ ಕ್ಷಮೆ ಕೇಳಿ: ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ

0
30

ಬೆಂಗಳೂರು: ತಮಿಳುನಿಂದ ಕನ್ನಡ ಜನ್ಮಿಸಿದೆ ಎಂದು ಹೇಳಲು ಕಮಲ್‌ ಹಾಸನ್‌ ಅವರು ಭಾಷಾತಜ್ಞರೇ? ಕ್ಷಮೆ ಕೇಳಿದ್ದರೆ ಎಲ್ಲವೂ ಮುಗಿಯುತ್ತಿತ್ತಲ್ಲವೇ? ಆ ಹೇಳಿಕೆ ನೀಡುವ ಅಗತ್ಯವೇನಿತ್ತು? ಎಂದು ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿದೆ.
ನಟ ಕಮಲ್‌ ಹಾಸನ್‌ ನಟಿಸಿರುವ ಥಗ್‌ ಲೈಫ್‌ ಸಿನಿಮಾ ಹಂಚಿಕೆ & ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಕನ್ನಡಿಗರ ಭಾವನೆಗಳಿಗೆ ಹಾನಿ ಮಾಡಿ, ಈಗ ಕ್ಷಮೆ ಕೇಳುವುದಿಲ್ಲ ಎಂದರೆ ಹೇಗೆ? ವಾಕ್‌ ಸ್ವಾತಂತ್ರ್ಯ ಎಂದರೆ ಬೇರೆಯವರ ಭಾವನೆಗಳಿಗೆ ಹಾನಿ ಮಾಡುವುದು ಎಂದಲ್ಲ. ೧೯೫೦ರಲ್ಲಿ ರಾಜಗೋಪಾಲಚಾರಿ ಅವರು ಕ್ಷಮೆ ಕೋರಿದ್ದಾರೆ. ನೀವೇ ಸೃಷ್ಟಿಸಿರುವ ಸಮಸ್ಯೆಯನ್ನು ನೀವೆ ಬಗೆಹರಿಸಬೇಕು ಎಂದಿರುವ ಹೈ ಕೋರ್ಟ್‌ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ಹ 2.30ರವರೆಗೆ ಕಮಲ್ ಹಾಸನ್ ವಕೀಲರಿಗೆ ಗಡುವು ನೀಡಿದ್ದು, ನಿಲುವು ತಿಳಿಸುವಂತೆ ಕೋರ್ಟ್ ಸೂಚಿಸಿದ್ದು, ಕೋರ್ಟ್ ವಿಚಾರಣೆಯನ್ನು 2.30ಕ್ಕೆ ನಿಗದಿ ಮಾಡಿದೆ.

Previous article10ಸಾವಿರ ವನರಕ್ಷಕರಿಗೆ KSDL ವತಿಯಿಂದ ಸುರಕ್ಷಾ ಕಿಟ್
Next articleಗೃಹಲಕ್ಷ್ಮಿ: ಕಾರ್ಯಕರ್ತರಿಗೆ ಜಾಕ್ ಪಾಟ್- ರಾಜ್ಯದ ಮಹಿಳೆಯರಿಗೆ ಮಡ್ ಪಾಟ್