ಮಂಗಳೂರನ್ನು ಕಾಶ್ಮೀರವಾಗಿಸಲು ಯತ್ನ

ಸಂ.ಕ. ಸಮಾಚಾರ ಮೈಸೂರು: ದಕ್ಷಿಣ ಭಾರತದ ಮಂಗಳೂರನ್ನು ಕಾಶ್ಮೀರ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಡನೆ ಮಾತನಾಡಿ, ಮಂಗಳೂರು ಗಲಭೆಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರಣ ಎಂದು ಸಿದ್ಧವಾಗಿಟ್ಟುಕೊಂಡ ಆರೋಪ ಮಾಡುತ್ತಾರೆ. ಸುಹಾಸ್ ಶೆಟ್ಟಿ , ಮಡಿವಾಳ್ ಪ್ರವೀಣ್ ನೆಟ್ಟಾರ್ ಹತ್ಯೆಗೆ ಆರ್‌ಎಸ್‌ಎಸ್ ಕಾರಣನಾ? ಹಿಂದೂಗಳು ಇರುವ ಕಡೆ ಕೋಮು ಗಲಭೆ ಆಗುತ್ತಾ? ಕಾಶ್ಮೀರದಲ್ಲಿ ಗಜ್ವಾಯಿ ಅನುಷ್ಠಾನದ ವಿರುದ್ಧದ ಹೋರಾಟವನ್ನು ಬಿಜೆಪಿ ಮಾಡಿತ್ತು. ಆದರೆ ದಕ್ಷಿಣ ಭಾರತದಲ್ಲಿನ ಮಂಗಳೂರನ್ನು ಕಾಶ್ಮೀರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಹಾಗಾದರೆ ಜಗತ್ತಿನಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಆರ್.ಎಸ್.ಎಸ್ ಕಾರಣನಾ? ಬಿನ್ ಲಾಡೆನ್, ಮುಜಾಹಿದ್ದೀನ್ ಆರ್‌ಎಸ್‌ಎಸ್ ನವರಾ? ದಕ್ಷಿಣ ಕನ್ನಡವನ್ನು ಪ್ರಾಯೋಗಿಕವಾಗಿ ಕಾಶ್ಮೀರ ಮಾಡಲು ನೋಡುತ್ತಿದ್ದಾರೆ. ಮಂಗಳೂರು ಗಲಾಟೆಯಲ್ಲಿ ಯಾರು ಇದ್ದಾರೆ ಅವರ ಹಿನ್ನೆಲೆ ಏನು ಎಂದು ವಸ್ತುನಿಷ್ಠವಾಗಿ ನೋಡಿ ಎಂದು ಅವರು ತಾಕೀತು ಮಾಡಿದರು.

ಎಫ್.ಐ.ಆರ್ ಖಂಡನೀಯ: ಹೇಮಾವತಿ ಲಿಂಕ್ ಕೆನಾಲ್ ವಿರುದ್ಧದ ಹೋರಾಟಗಾರರ ಮೇಲೆ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಸ್ಥಳೀಯ ಜನರು ಮತ್ತು ಜನಪ್ರತಿನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆಯನ್ನು ನಡೆಸಬೇಕಿತ್ತು. ಈ ಯೋಜನೆಯನ್ನು ಮರು ವಿಮರ್ಶಿಸಬೇಕು. ಪ್ರತಿಭಟನೆ ಮಾಡಬಾರದು ಎಂದರೆ ಹೇಗೆ? ಯಾರೂ ಸರ್ವಾಧಿಕಾರಿ ಯಾಗಬಾರದು. ಹೋರಾಟ ಮಾಡುವವರ ಮೇಲೆ ದೌರ್ಜನ್ಯ ಮಾಡಬಾರದು ಎಂದರು.
ಕೆ.ಪಿ.ಎಸ್.ಸಿಯಲ್ಲಿ ಬಹಳ ಸಮಸ್ಯೆ ಇದೆ. ಜಾತಿ ಆಧಾರದ ಮೇಲೆ ನೇಮಕಾತಿ ಮಾಡಿರುವುದರಿಂದ ಸಮಸ್ಯೆ ಆಗಿದೆ. ಯಾವುದಾವುದೋ ಕೋಟದಲ್ಲಿ ನೇಮಕವಾಗಿದೆ. ಸರ್ಕಾರ ನಡೆಸುವವರು ಇದರ ಕಡೆ ಗಮನ ಕೊಡಿ. ಈಗ ಸರ್ಕಾರ ಎನ್ನುವುದು ಸತ್ತು ಹೋಗಿದೆ. ಇನ್ನೂ ಮೂರು ವರ್ಷಗಳು ಇರುವಾಗ ಈಗಾಗಲೇ ದಿನ ಎಣಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಅಲ್ಪಸಂಖ್ಯಾತ ಇಲಾಖೆಯ ಕಾಂಪೌಡ್ ನಿರ್ಮಾಣ ಒಬ್ಬನಿಗೆ ಕೊಟ್ಟಿದ್ದಾರೆ. ಯಾವುದೇ ಟೆಂಡರ್ ಕರೆದಿಲ್ಲ. ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ. ಈ ಸರ್ಕಾರ ಹಗರಣಗಳನ್ನು ಅವಾರ್ಡ ಎಂದು ಕೊಂಡಿದೆ. ಮೂಡಾ, ವಾಲ್ಮೀಕಿ ಹಗರಣ ಅವರಿಗೆ ಸಿಕ್ಕಿರುವ ಅವಾರ್ಡ್ ಎಂದು ಕೊಂಡಿದ್ದಾರೆ. ಹಗರಣ ನಡೆಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ನಂತರ ಬೇರೆ ಇಲಾಖೆಗೆ ವರ್ಗಾವಣೆ ಮಾಡುತ್ತಾರೆ. ಇದೊಂದು ಭ್ರಷ್ಟ ಸರ್ಕಾರ ಎಂದು ಅವರು ಜರಿದರು.
ನಮ್ಮ ಮೇಲೆ ಶೇ. ೪೦ ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದರು. ಈ ಸರ್ಕಾರ ಶೇ. ೬೯ ಕಮಿಷನ್ ಹೊಡೀತಾ ಇದೆ. ಮುಂದೊಂದು ದಿನ ಶೇ. ೧೦೦ಕ್ಕೆ ಹೋಗಲಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಅವಶ್ಯಕತೆ ರಾಜ್ಯಕ್ಕೆ ಇಲ್ಲ. ಎರಡು ವರ್ಷಗಳಲ್ಲಿ ಬೆಲೆ ಏರಿಕೆ ಮಾಡಿದ್ದಾರೆ. ಇನ್ನೂ ಮೂರು ವರ್ಷ ನೋಡಿ ಯಾವ ಯಾವ ಬೆಲೆ ಎಷ್ಟು ಏರುತ್ತದೆ ಎಂದು ಗೊತ್ತಾಗುತ್ತದೆ ಎಂದರು.
ಕಮಲ್ ಹಾಸನ್ ಭಾಷಾ ತಜ್ಞರಲ್ಲ. ಅರೆ ಬರೆ ತಿಳುವಳಿಕೆಯಿಂದ ಮಾತನಾಡಿದ್ದಾರೆ. ಕನ್ನಡ ಮತ್ತು ತಮಿಳು ಸಹೋದರ ಭಾಷೆಗಳು. ತಮಿಳಿನಿಂದ ಕನ್ನಡ ಬಂದಿದೆ ಎಂದರೆ ಕಮಲ್ ಗೆ ಅಜ್ಞಾನ ಇದೆ. ನಾವೆಲ್ಲಾ ಒಂದು ಕವಲಿನಿಂದ ಬೆಳೆದು ಬಂದವರು. ಎನ್ನಬಹುದು. ಕೆಲವೊಮ್ಮೆ ವಿಷಯಾಂತರ ಮಾಡಿ ಟ್ಯೂಲ್ ಕಿಟ್ ನರೇಷಿಯನ್ ಇರುತ್ತಾರೆ. ಈತರದ್ದು ಒಂದೊಂದು ಬಿಟ್ಟು ನೋಡ್ತಾ ಇರುತ್ತಾರೆ ಎಂದು ವ್ಯಂಗ್ಯವಾಡಿದರು.