ಹುಬ್ಬಳ್ಳಿ; ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ನಟಿ ರಚಿತಾ ರಾಮ್ ಹೇಳಿದರು.
ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಶ್ರೀ ಪದ್ಮಾ ಮಾಲ್ ನಲ್ಲಿರುವ ಸುಲ್ತಾನ ಡೈಮಂಡ್ ಆ್ಯಂಡ್ ಗೋಲ್ಡ್ ಶೋ ರೂಂ ಉದ್ಘಾಟಿಸಿದ ಬಳಿಕ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಹಲವಾರು ಅಭಿಮಾನಿ ಬಳಗವನ್ನು ಹೊಂದಿರುವ ಕಮಲ್ ಹಾಸನ್ ಅವರು ಈ ರೀತಿ ಕನ್ನಡದ ಬಗ್ಗೆ ಮಾತನಾಡಿರುವುದು ಸಮಂಜಸವಲ್ಲ. ಈ ಬಗ್ಗೆ ಅವರು ಕ್ಷಮೆಯಾಚಿಸಬೇಕು ಎಂದು ನಾನು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದೆ ಇಂದು ಕೂಡಾ ಆಗ್ರಹಿಸುತ್ತೇನೆ ಎಂದರು.
ಥಗ್ ವಾರ್ ಚಲನಚಿತ್ರ ವಿಷಯಗಳ ಕುರಿತು ಚಿತ್ರರಂಗದ ಹಿರಿಯರು ನಿರ್ಧರಿಸುತ್ತಾರೆ ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯೆ ನೀಡಲ್ಲ ಎಂದರು.