ಮೈಸೂರು ಪತ್ರಕರ್ತ  ಮಧುಸೂದನ್ ನಿಧನ


ಮೈಸೂರು: ಪತ್ರಕರ್ತ ಮಧುಸೂದನ್ (ಯುಎಂಎನ್ ಮಧು ) ಇಂದು ನಿಧನರಾಗಿದ್ದಾರೆ.

ಇವರಿಗೆ 48 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಮಧು ಸಂಜೆ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಇವರು ಪತ್ನಿ, ತಾಯಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ವಿವಿಧ ಮಾಧ್ಯಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು.