ಎಂಇಎಸ್ ಹದ್ದು ಬಸ್ತಿನಲ್ಲಿ ಇಡುವುದು ಗೊತ್ತು: ಸಿಎಂ ಬೊಮ್ಮಾಯಿ

0
19

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವರ ಭೇಟಿ ನಂತರವೂ ಎಂಇಎಸ್ಎ‌ ಪುಂಡಾಟ ಮುಂದುವರಿದಿದ್ದು, ಯಾವ ರೀತಿ ಹದ್ದುಬಸ್ತಿನಲ್ಲಿಡಬೇಕೆಂದು ನನಗೆ ಗೊತ್ತಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂಇಎಸ್‌ ಮುಖಂಡರಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡಾಟ ಇದೆ ಮೊದಲಲ್ಲ. ಕಳೆದ 50 ವರ್ಷದಿಂದ ಮಾಡುತ್ತಲೇ ಬಂದಿದೆ. ಅದನ್ನು ನಿಯಂತ್ರಿಸುವ ಕೆಲ ನಾವು ಮಾಡುತ್ತೇವೆ ಎಂದರು.

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ..!
ಕುಕ್ಕರ್ ಬಾಂಬ್ ಬ್ಲಾಸ್ಟ್‌ ವಿಚಾರವಾಗಿ ಡಿಕೆಶಿ ಹೇಳಿಕೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯನವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಮೊದಲು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನು ಗಮನಿಸಿ‌ ಪ್ರತಿಕ್ರಿಯೆ ನೀಡಬೇಕು. ಅದೊಂದು ಆಕಸ್ಮಿಕ ಘಟನೆ, ಪ್ರೆಶರ್ ಕುಕ್ಕರ್‌ನಿಂದ ಆಗಿದ್ದು ಅಂತ ಹೇಳಿದ್ದಾರೆ. ಶಿವಕುಮಾರ್ ಹೇಳಿದ ಮಾತು ಕೇಳಿಸಿಕೊಂಡು ಮಾತನಾಡಲಿ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಕೆಲವು ಮಹತ್ವದ ಬಿಲ್ ತರುತ್ತಿದ್ದೇವೆ. ಎಸ್ಸಿ-ಎಸ್ಟಿ ಮೀಸಲಾತಿ ಜಾರಿ ಬಿಲ್ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಬೆಳಗಾವಿ ಅಧಿವೇಶನದಲ್ಲಿ ಆರ್ಡಿನೆನ್ಸ್ ರೀಪ್ರೇಮೆಂಟ್ ಬಿಲ್ ಬರುತ್ತೆ.
ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಚಾರಗಳು ಚೆರ್ಚೆಗೆ ಬರಲಿದ್ದು, ಅದಕ್ಕೆ‌ ಸರ್ಕಾರ ಉತ್ತರ ನೀಡಲಿದೆ ಎಂದರು

Previous articleಸಿಎಂ‌ ಸಭೆಯಲ್ಲೂ ಜವಳಿ ಇಲಾಖೆ ವಿರುದ್ಧ ಅಭಯ ಗರಂ
Next articleಸಿಎಂ ಮನೆ ಮುಂದೆ ಪೊಲೀಸರ ವಿರುದ್ಧ ಆಶ್ರಯ ನಿವಾಸಿಗಳ ಆಕ್ರೋಶ