ವಾಣಿಜ್ಯನಗರಿಯಲ್ಲಿ ಮುಂದುವರಿದ ವರುಣಾರ್ಭಟ

0
23

ಹುಬ್ಬಳ್ಳಿ: ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಬುಧವಾರವೂ ರಭಸದಿಂದ ಸುರಿಯಿತು.
ನಗರದ ಪ್ರಮುಖ ಕೆರೆಯಾದ ಉಣಕಲ್ ಕೆರೆ ಭರ್ತಿಯಾಗಿ ನೀರು ಕೋಡಿ ಮೇಲೆ ಹರಿಯಿತು.
ಹುಬ್ಬಳ್ಳಿ-ಧಾರವಾಡ ಸಂಪರ್ಕ ರಸ್ತೆಯಲ್ಲಿ, ನಗರದ ಹೃದಯಭಾಗದ ರಸ್ತೆ, ಬಡಾವಣೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ, ಜನ ಸಂಚಾರಕ್ಕೆ ಅಡಚಣೆಯಾಯಿತು. ಸತತ ಮಳೆಗೆ ನಾಲಾಗಳು, ಚರಂಡಿಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ಮಂಗಳವಾರ ಮಧ್ಯಾಹ್ನ ಸುರಿದ ಮಳೆಗೆ ಕೆರೆ ಸ್ವರೂಪ ಪಡೆದಿದ್ದ ನಗರದ ನೆಹರು ಮೈದಾನಕ್ಕೆ ಬುಧವಾರ ಮತ್ತಷ್ಟು ಮಳೆ ನೀರು ನುಗ್ಗಿತ್ತು.

Previous articleರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆ ಹಸ್ತಾಂತರ
Next articleಭೀಕರ ಸರಣಿ ಅಪಘಾತ: ಆರು ಜನರ ಸಾವು