ಹುಬ್ಬಳ್ಳಿ: ಪಹಲ್ಗಾಮ್ ಕೃತ್ಯದಲ್ಲಿ ಆಂತರಿಕ ಜಿಹಾದಿಗಳ ಕೈವಾಡ ವಿದೆ. ಹೊರಗಿನ ಶತ್ರುಗಳನ್ನು ಎದುರಿಸಲು ನಮ್ಮ ಸೈನಿಕರು ಸಿದ್ದರಿದ್ದಾರೆ. ಆಂತರಿಕ ದೇಶದ್ರೋಹಿಗಳು, ಜಿಹಾದಿಗಳ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪಡೆ ರಚನೆ ಮಾಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀರ್ಘಾವಧಿಯ ವಿಸಾ ಪಡೆದು ಕರ್ನಾಟಕದಲ್ಲಿ ಅಥವಾ ಭಾರತದ ಬೇರೆ ಬೇರೆ ಕಡೆಗಳಲ್ಲಿ ವಾಸವಾಗಿರುವ ಪಾಕಿಸ್ತಾನಿಗಳು ಕ್ಯಾನ್ಸರ್ ಇದ್ದಂತೆ. ಅವರನ್ನು ಹೊರಹಾಕಬೇಕು. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಕ್ರಮ ಮಸೀದಿಗಳು ಹೆಚ್ಚಾಗಿವೆ. ಅಲ್ಲದೇ, ತಬ್ಲೀಕಿಗಳ ಸಂಖ್ಯೆಯೂ ಹೆಚ್ಚಾಗಿದೆ. ದೇಶದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ತಬ್ಲೀಕಿಗಳೇ ಕಾರಣ ಹೀಗಾಗಿ ಅವರನ್ನು ಒದ್ದು ಹೊರಗೆ ಹಾಕಬೇಕು ಎಂದು ಕಿಡಿ ಕಾರಿದರು.
ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಗಾಂಜಾ, ಡ್ರಗ್ಸ್, ಕೊಲೆ, ಗಲಭೆಗಳು, ಗೋಹತ್ಯೆ, ಲವ್ ಜಿಹಾದ್, ಆಕ್ರಮ ಕಟ್ಟಡಗಳು ಇತ್ಯಾದಿ ದಿನೇ ದಿನೇ ಬೆಳೆಯುತ್ತಲೆ ಇದೆ. ಇವುಗಳ ಜೊತೆ ದೇಶದ್ರೋಹಿ ಚಟುವಟಿಕೆಗಳು ಪಸರಿಸುತ್ತಿದೆ. ಅಕ್ರಮ ಮಸೀದಿ, ಮದರಸಾ, ದರ್ಗಾಗಳ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಈ ವಿಚಾರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ. ಪೊಲೀಸ್ ಕಮೀಶನರ್ ಹೇಳಿಕೆಯಲ್ಲಿ ೧೫ ರಿಂದ ೫೦ ವಯಸ್ಸಿನವರು ಗುಜರಾತದಿಂದ ಧರ್ಮ ಪ್ರಚಾರಕ್ಕಾಗಿ ಬಂದಿದ್ದು ಉಲ್ಲೇಖಿಸಿದ್ದಾರೆ. ೧೫ ವಯಸ್ಸಿನವರು ಧರ್ಮದ ಪ್ರಸಾರ ಮಾಡುವ ಅಧ್ಯಯನ ಹಾಸ್ಯಾಸ್ಪದವಾಗಿದೆ. ಸಮಾಜದ, ದೇಶದ ಸುರಕ್ಷತೆಗೆ ಸಮಗ್ರ ತನಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಮದರಸಾ, ಖಬರಸ್ತಾನ, ದರ್ಗಾ ಹೊರಗೆ, ಒಳಗೆ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಆಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಅನುಮತಿ ನೀಡಬಾರದು. ಹುಬ್ಬಳ್ಳಿ-ಕುಂದಗೋಳ ಕ್ರಾಸ್, ಪಿ.ಬಿ.ರೋಡ್, ಇಸ್ಲಾಂಪುರ ನಗರ, ಮಾವನೂರ, ಹಿರೇಹೊನ್ನಳ್ಳಿ ರೋಡ, ಬಾನಗಿ ಗುಡಿಹಾಳ, ಗುಡಿಹಾಳ ರೋಡ, ಧಾರವಾಡದ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಮದರಸಾ ಕಟ್ಟಲಾಗುತ್ತಿದೆ. ಅವುಗಳ ಪರವಾನಗಿ ಪರಿಶೀಲಿಸಬೇಕು. ಇಲ್ಲದಿದ್ದರೆ ಜೆಸಿಬಿ ಮೂಲಕ ನೆಲಸಮಗೊಳಿಸಬೇಕು. ಹೊಸ ಹೊಸ ಬಡಾವಣೆಗಳ ನಿರ್ಮಾಣದಲ್ಲಿ ವಸತಿಗೆಂದು ಜಾಗ ಪಡೆದು ಮಸೀದಿ ಮದರಸಾ, ನಿರ್ಮಾಣ ಮಾಡುತ್ತಿದ್ದಾರೆ ಇದರ ಬಗ್ಗೆ ತನಿಖೆಯಾಗಬೇಕು ಎಂದು ಮುತಾಲಿಕ್ ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದ್ದಾರೆ.