ಚಿಕ್ಕಮಗಳೂರು: ದೇಶದಲ್ಲಿ ಸಿಂದೂರ ಸಮರ ನಿಂತಿಲ್ಲ. ಗಡಿ ಭಾಗದಲ್ಲಿ ಇಂದಿಗೂ ಕೂಡ ಯುದ್ಧದ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ 4 ಪ್ಲೇನ್ ಹಾರಿಸಿದ್ದು ಬಿಟ್ರೆ ಉಗ್ರರಿಗೆ ಏನೂ ಮಾಡಿಲ್ಲವೆಂದು ಹೇಳಿರುವವರಿಗೆ ತಲೆ ಕೆಟ್ಟಿದೆ. ಅವರಿಗೆ ತಾಕತ್ತು ಇದ್ರೆ ಯುದ್ಧದ ಗಡಿಯ ನಿಂತು ಬರಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸವಾಲ್ ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಿರಿಯ ಮುಖಂಡರಿಗೆ ದೇಶದ ಬಗ್ಗೆ ಗೌರವ ಇಲ್ಲ, ಸೈನಿಕರ ಮೇಲೆ ವಿಶ್ವಾಸ ಇಲ್ಲ. ಮತೀಯ ವಾದ, ವೋಟ್ ಪಾಲಿಟಿಕ್ಸ್ ಬಿಟ್ಟರೆ ಬೇರೇನೂ ಇವರ ತಲೆಯಲ್ಲಿ ಇಲ್ಲ. ಈ ಸಮಾವೇಶ ಆದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದರು.
ನಿಮಗೆ ಸಮಾವೇಶ ಬೇಕಾಗಿತ್ತಾ, ಕಾಂಗ್ರೆಸ್‌ನ ಹಿರಿಯ ಮತ್ತು ಮರಿ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು. ಬ್ರಾಂಡ್ ಬೆಂಗಳೂರು ಹೋಗಿದೆ. ಮುಳುಗುತ್ತಿರುವ, ಕಸದ ರಾಶಿ, ಗುಂಡಿ ಬಿದ್ದಿರುವ ರಸ್ತೆಯ ಡಿಕೆಶಿ ಬೆಂಗಳೂರು ಆಗಿದೆ ಎಂದು ಆರೋಪಿಸಿದರು.