ಇಡ್ಲಿ ತಿನ್ನಲು ಬಂದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

0
19

ರಾಯಚೂರು: ಇಡ್ಲಿ ತಿನ್ನಲು ಬಂದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ಬೆಳಗಿನ ಜಾವ ನಗರದ ಜಾಕೀರ ಹುಸೇನ ವೃತ್ತದಲ್ಲಿ ಘಟನೆ ನಡೆದಿದೆ.
ಕೊಲೆಯಾದ ಯುವಕ ಜಾಹೀರಾಬಾದ್ ಬಡಾವಣೆಯ ನಿವಾಸಿ ಸಾಧಿಕ್(27) ಎಂದು ಗುರುತಿಸಲಾಗಿದೆ.
ಕೊಲೆಗೈದ ಆರೋಪಿ ಕರೀಂ ಎಂದು ತಿಳಿದುಬಂದಿದೆ. ಇನ್ಙೊಬ್ಬ ಆರೋಪಿ ಪರಾರಿಯಾಗಿದ್ದಾರೆ. ಹತ್ಯೆಗೀಡಾದ ಸಾಧಿಕ ಮನೆಯಿಂದ ಹೊರಬಂದು ಇಡ್ಲಿ ತಿನ್ನಲು ಬಂದಾಗ ಈ ಘಟನೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆ ನಡೆದಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ.

Previous articleಧರ್ಮಸ್ಥಳದ ಯುವತಿ ಪಂಜಾಬಿನಲ್ಲಿ ನಿಗೂಢ ಸಾವು
Next articleಅನುಮಾನಾಸ್ಪದ ವ್ಯಕ್ತಿಗಳ ಒಡಾಟದ ಬಗ್ಗೆ ಪತ್ರ ವಿಚಾರ: ಪೊಲೀಸ್ ಆಯುಕ್ತರ ಉತ್ತರ ಬೇಸರ ತಂದಿದೆ