ಕುಷ್ಟಗಿ: ಗದಗ-ವಾಡಿ ರೈಲು ಯೋಜನೆಯ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಚಾರ ಸೇವೆ ಮೇ 15ರಂದು ಆರಂಭವಾಗಲಿದೆ.
ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಅಧಿಕೃತವಾಗಿ ಮೇ 15 ಗುರುವಾರ ಬೆಳಗ್ಗೆ 9:45ಕ್ಕೆ ಕುಷ್ಟಗಿ ನಗರದ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ನೂತನವಾಗಿ ನಿರ್ಮಾಣವಾಗಿರುವ ಕುಷ್ಟಗಿ – ತಳಕಲ್ ರೈಲ್ವೆ ಮಾರ್ಗಕ್ಕೆ ಮತ್ತು ಗದಗ – ವಾಡಿ ಹೊಸ ರೈಲ್ವೆ ಮಾರ್ಗದ ವಿಸ್ತರಣೆಗೆ ವಿಸ್ತರಣೆಗೆ ಚಾಲನೆ ನೀಡಲಿದ್ದಾರೆ. ತದನಂತರ ಕುಷ್ಟಗಿ – ಹುಬ್ಬಳ್ಳಿ ವರೆಗೆ ಸಂಚರಿಸುವ ಪ್ಯಾಸೆಂಜರ್ ರೈಲ್ವೆಗೆ ಚಾಲನೆ ನೀಡಲಿದ್ದಾರೆ ಎಂಬುದು ಅಧಿಕೃತವಾಗಿ ಟಿಪಿ (ಪ್ರವಾಸದ ಮಾಹಿತಿ)ಹೊರ ಬಿದ್ದಿದೆ.
ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಹೋಗವು ಜನರು ಇನ್ನೂ ಐದು ಕಾಯಬೇಕಾಗಿದೆ: ಬಹಳ ವರ್ಷಗಳ ಆಸೆ ಈಡೇರಿದಂತಾಗುತ್ತದೆ. ರೈಲು ಚಾಲನೆ ಕಾರ್ಯಕ್ರಮ ಕುಷ್ಟಗಿಯಲ್ಲೇ ಆಯೋಚಿಸುತ್ತಿರುವುದು ಸಂತಸ ವ್ಯಕ್ತವಾಗಿದೆ. ಕಳೆದ ಮಾ.28ರಂದು ಪ್ರಾಯೋಗಿಕ ರೈಲು ಸಂಚಾರದ ವೇಳೆ ರೈಲು ಕಂಡಿರುವ ತಾಲೂಕಿನ ಜನ ಇಲ್ಲಿಂದ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಕಾತುರ ದಿನೇ ದಿನೇ ಹೆಚ್ಚುತ್ತಿದೆ.
ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಚಾರ ಆರಂಭಿಸಿದರೆ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಬಸ್ ಸೇವೆ ಅಗತ್ಯವಾಗಿದೆ. ಕುಷ್ಟಗಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ 2ಕಿ.ಮೀ. ದೂರದಲ್ಲಿದೆ. ರೈಲು ನಿಲ್ದಾಣದಿಂದ ನಿರ್ಗಮಿಸುವ ಹಾಗೂ ಆಗಮಿಸುವ ವೇಳೆಯಲ್ಲಿ ಸ್ಥಳೀಯ ಬಸ್ ಸೇವೆ ಅಗತ್ಯವಾಗಿದೆ. ಅಲ್ಲದೇ ಕಂದಕೂರು ಮಾರ್ಗವಾಗಿ ಸಂಚರಿಸುವ ಬಸ್ ಇಲ್ಲಿನ ರೈಲು ನಿಲ್ದಾಣದ ಮೂಲಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.