ಸಿರಿಗೆರೆ: ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯಲ್ಲಿ ಶನಿವಾರ ತಡರಾತ್ರಿ ಗುಡುಗು ಸಹಿತ ಬಿರುಸಾದ ಮಳೆ ಸುರಿದಿದೆ.
ಶನಿವಾರ ಸುಮಾರು 12.30 ಸುಮಾರಿನಲ್ಲಿ ಗಾಳಿ, ಗುಡುಗು, ಮಿಂಚು, ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ, ಬೆಳಗ್ಗೆ 6 ಗಂಟೆಯವರೆಗೆ ಸುರಿದಿದೆ. ಇದರಿಂದ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಅನುಕೂಲವಾಗಿದೆ. ಅಳಗವಾಡಿ ಗ್ರಾಮದಲ್ಲಿ ಕಳೆದ ಮಂಗಳವಾರದ ಶ್ರೀಕಣಿವೆ ಮಾರಮ್ಮ ದೇವಿ ಜಾತ್ರೆ ಆರಂಭವಾಗಿದೆ. ಶುಕ್ರವಾರ ಭಕ್ತರು ಬೇವಿನ ಸೀರೆ ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಿದ್ದಾರೆ.
ಶನಿವಾರ ಸಂಜೆ ಶ್ರೀ ಕಣಿವೆ ಮಾರಮ್ಮದೇವಿಯ ಸಿಡಿ ಉತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಬಾಳೆ ಹಣ್ಣು, ತೆಂಗಿನ ಕಾಯಿ ವ್ಯಾಪಾರಿಗಳು ಶುಕ್ರವಾರ ದೇವಸ್ಥಾನದ ಮುಂಭಾಗದಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ರಾತ್ರಿ ಸುರಿದ ಮಳೆಯಿಂದ ಬಾಳೆ ಹಣ್ಣು, ತೆಂಗಿನ ಕಾಯಿಗಳು ನೀರಿನಲ್ಲಿ ತೇಲಾಡಿವೆ.
ರಾತ್ರಿ ದಿಢೀರ್ ಸುರಿದ ಮಳೆಯಿಂದಾಗಿ ದೇವಸ್ಥಾನ ಮುಂಭಾಗದಲ್ಲಿ ಹಾಕಿದ್ದ ಬಾಳೆ ಹಣ್ಣು, ತೆಂಗಿನ ಕಾಯಿಗಳನ್ಬು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಯಾವುದೇ ಸುರಕ್ಷಿತ ಸ್ಥಳವಿಲ್ಲದೇ ಮಳೆಯಲ್ಲಿ ಬಿಟ್ಟಿದ್ದರಿಂದ ತೆಂಗಿನ ಕಾಯಿ, ಬಾಳೆ ಹಣ್ಣುಗಳು ನೀರಿನಲ್ಲಿ ತೇಲಾಡಿವೆ. ಬೆಳಗ್ಗೆ ಮಳೆ ನಿಂತ ಮೇಲೆ ನೀರಿನಲ್ಲಿದ್ದ ತೆಂಗಿನ ಕಾಯಿ, ಬಾಳೆ ಹಣ್ಣು ಹಾಯ್ದು ಬೇರೆಡೆ ಸಾಗಿಸುತ್ತಿರುವುದು ಕಂಡು ಬಂತು.
Home ನಮ್ಮ ಜಿಲ್ಲೆ ಚಿತ್ರದುರ್ಗ ಅಳಗವಾಡಿ ಶ್ರೀ ಕಣಿವೆ ಮಾರಮ್ಮದೇವಿ ಜಾತ್ರೆ: ಮಳೆಗೆ ನೀರಿನಲ್ಲಿ ತೇಲಾಡಿದ ತೆಂಗಿನ ಕಾಯಿ, ಬಾಳೆಹಣ್ಣು