ವಿ.ಸಿ.ನಾಲೆಯಲ್ಲಿ ಮತ್ತೊಂದು ದುರಂತ : ತಂದೆ -ಇಬ್ಬರು ಮಕ್ಕಳು ಶವವಾಗಿ ಪತ್ತೆ

0
53

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆ‌ರ್.ಎಸ್. ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯಲ್ಲಿ ಮತ್ತೊಂದು ದುರಂತ ನಡೆದಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕು ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38) ಅವರ ಮಕ್ಕಳಾದ ಅದ್ವತ್ (8) ಮತ್ತು ಅಕ್ಷರಾ (3) ಅವರು ಕಾರು ಸಮೇತ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಏನಿದು ಘಟನೆ: ಕುಮಾರಸ್ವಾಮಿ ಏ.16ರಂದು ತಮ್ಮ ಮಕ್ಕಳ ಜತೆ ತಮ್ಮ ಕಾರಿನಲ್ಲಿ ಬೆಂಗಳೂರಿನಿಂದ ಕೆ. ಆರ್. ನಗರಕ್ಕೆ ಹೊರಟಿದ್ದರು. ಆದರೆ ನಾರ್ತ್ ಬ್ಯಾಂಕ್‌ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯಲ್ಲಿ ಏ. 17ರಂದೇ ಮುಳುಗಿದ್ದಾರೆ. ಆದರೆ ಅಂದಿನಿಂದ ಇಂದಿನವರಿಗೆ ಈ ದುರಂತ ಯಾರ ಗಮನಕ್ಕೂ ಬಂದಿರಲಿಲ್ಲ.

ಏ.19ರಂದು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇಂದು ಕಾರು ಮತ್ತು ಮೃತದೇಹಗಳನ್ನು ನಾಲೆಯಿಂದ ಮೇಲೆ ಎತ್ತಲಾಗಿದೆ. ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು. ಕೆ.ಆರ್.ಎಸ್. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 208 ಮಂದಿ ನೀರು ಪಾಲಾಗಿದ್ದಾರೆ.

Previous articleದೇಶದ ಸೈನಿಕರ ಯಶಸ್ಸಿಗಾಗಿ ಪರಶುರಾಮನ ಕೊಡಲಿಯಿಟ್ಟು ಮಹಾಯಾಗ
Next articleನಾನ್ ಪೋಲಿ ಹಾಡು ಕೇಳಿ