Home ಅಪರಾಧ ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ವೈದ್ಯೆ ವಿರುದ್ಧ ಎಫ್‌ಐಆರ್‌: ಕೆಲಸದಿಂದಲೇ ವಜಾ

ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ವೈದ್ಯೆ ವಿರುದ್ಧ ಎಫ್‌ಐಆರ್‌: ಕೆಲಸದಿಂದಲೇ ವಜಾ

0
109

ಮಂಗಳೂರು : ನಗರದ ಹೈಲ್ಯಾಂಡ್‌ನ ಖಾಸಗಿ ಆಸ್ಪತ್ರೆಯ ವೈದ್ಯೆ ಸಾಮಾಜಿಕ ಮಾಧ್ಯಮದಲ್ಲಿ ದೇಶ ಹಾಗೂ ಹಿಂದೂ ವಿರೋಧಿ ಬರವಣಿಗೆಯ ಪೋಸ್ಟ್ ಹಾಕಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆಯ ಎಫ್‌ಐಆರ್ ದಾಖಲಾಗಿದೆ.
‘ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆಯ ಎಫ್‌ಐಆರ್
ದಾಖಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್‌ಆರ್ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್ಎಸ್ ಕಲಂ 196(1)(a), 353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಫೀಫ ಫಾತಿಮಾ ಪೋಸ್ಟ್​ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಹೈಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ವಜಾಗೊಳಿಸಿದೆ.